ಸನಾತನ ಪದ ಬಳಕೆ ಬಸವ ತತ್ವಗಳಿಗೆ ದ್ರೋಹಃ ಹಾಸಿಂಪೀರ

ವಿಜಯಪುರ, ಜ.8-ಬಸವಕಲ್ಯಾಣದಲ್ಲಿ ಕರ್ನಾಟಕ ಸರಕಾರ ನಿನ್ನೆ ವಿಶ್ವಗುರು ಬಸವಣ್ಣನವರ ಆಶಯದ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮದ ಎಲ್ಲ ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಅದರಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಎಂಬ ಶೀರ್ಷಿಕೆ ಮಾಡಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸನಾತನ ಪದ ಪೂಜ್ಯಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿದೆ ಇದು ಅತ್ಯಂತ ಖಂಡನೀಯ ಎಂದು ಬಸವ ಸಂಸ್ಕøತಿ ಉತ್ಸವ ಸಮಿತಿ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಟೀಕಿಸಿದ್ದಾರೆ.
ಬಸವಾದಿ ಪ್ರಥಮರು ಸಮಾಜದ ಕಂದಾಚಾರ ಹೋಗಲಾಡಿಸಲು ಹಾಗು ಸಮಾಜದ ಮೌಲ್ಯಗಳನ್ನು ಜೀವನದುದ್ದಕ್ಕೂ ಪ್ರತಿಪಾದನೆ ಮಾಡುತ್ತಾ ಬಂದಿದ್ದಾರೆ. ಸನಾತನ ಕಾಲದ ಪರಂಪರೆಗಳನ್ನು ಶರಣರು ತಿರಸ್ಕಾರ ಮಾಡಿ ಮಾನವೀಯತೆಗೆ ಮಹತ್ವ ನೀಡಿದ್ದಾರೆ.
ಸನಾತನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ನನ್ನ ವಿರೋಧವಿಲ್ಲ. ಆದರೆ ಪೂಜ್ಯ ಬಸವಣ್ಣನವರ ಅನುಭವ ಮಂಟಪ ಕಾರ್ಯಕ್ರಮದ ಹಲವಾರು ಪತ್ರಿಕೆಗಳಲ್ಲಿ ಜಾಹೀರಾತಿನಲ್ಲಿ ಸನಾತನ ಪದ ಬಳಕೆ ಮಾಡಿದ್ದು ಅಕ್ಷಮ ಅಪರಾಧ. ಸರಕಾರ ಮಾಡಿದ ತಪ್ಪುನ್ನು ಬಸವಾದಿ ಶರಣರ ಅನುಯಾಯಿಗಳ ಕ್ಷಮೆ ಕೇಳಿ ಮರಳಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಆಗ್ರಹಿಸಿರುವ ಹಾಸಿಂಪೀರ ವಾಲೀಕಾರ ಸರಕಾರದ ನಿಲುವಿಗೆ ತೀವ್ರ ಆಕ್ಷೇಪಣೆ ವ್ವಕ್ತಪಡಿಸಿದ್ದಾರೆ