ಸನಾತನ ಧರ್ಮ. ಸಂಸ್ಕøತಿ ಇಡೀ ಜಗತ್ತಿಗೆ ತೋರಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ: ಡಾ. ಕಾಗಲಕರ

ವಿಜಯಪುರ, ಜ.13:ಭಾರತದ ಸನಾತನ ಧರ್ಮ ಹಾಗೂ ಸಂಸ್ಕøತಿ ಯನ್ನು ಇಡೀ ಜಗತ್ತಿಗೆ ಎತ್ತಿ ತೋರಿಸಿದ ಮಹಾನ್ ವ್ಯಕ್ತಿ ವೀರ ಸನ್ಯಾಸಿ ವಿವೇಕಾನಂದರು ಎಂದು ಸಾಹಿತಿ ಹಾಗೂ ವೈದ್ಯ ಡಾ. ಸುರೇಶ ಕಾಗಲಕರರೆಡ್ಡಿ ಅವರು ಹೇಳಿದರು.

ನಗರದ ಅನ್ನಪೂರ್ಣ ಸೇವಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ರಾಷ್ಟ್ರೀಯ ದಿನಾಚರಣೆ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ವಿವೇಕಾನಂದರು ವೀರ ಸನ್ಯಾಸಿಗಳು. ತತ್ವಶಾಸ್ತ್ರದಲ್ಲಿ ಅಭ್ಯಾಸ ಮಾಡಿದ ಮೇಧಾವಿಗಳು ,ಚಿಂತನಕಾರರು, ತತ್ವಜ್ಞಾನಿಗಳು, ವೀರ ಸನ್ಯಾಸಿ ಆಗಿದ್ದಾರೆ ಎಂದು ಬಣ್ಣಿಸಿದರು.

ಯಾವುದೇ ಕಾರ್ಯವನ್ನು ಧೃತಿಗೆಡದೆ ಮಾಡುವ ಮೂಲಕ ಯುವಕರಿಗೆ ಪ್ರೇರಣೆ ನೀಡಿದ ಭಾರತೀಯ ಧಾರ್ಮಿಕ ಗುರು ವಿವೇಕಾನಂದರು. ಯುವಕರಿಗೆ ಅನೇಕ ಸಂದೇಶ ಹಾಗೂ ಪ್ರೇರಣೆಗಳ ಮಾತುಗಳಿಂದ ಏಳಿ ಎದ್ದೇಳಿ ಎಂಬ ಸಂದೇಶದಿಂದ ಯಾವುದೇ ಕಾರ್ಯವನ್ನು ಮಾಡಬೇಕಾದರೆ ಧೈರ್ಯ, ಶಕ್ತಿ ಹಾಗೂ ಶಿಕ್ಷಣ ಅತಿ ಮುಖ್ಯ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅದ್ಭುತವಾದ ಮಾತುಗಳು ಇಡೀ ಜಗತ್ತಿಗೆ ಭಾರತದ ಕುರಿತಾಗಿ ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಕಣ್ಣು ತೆರೆದು ನೋಡುವಂತೆ ಮಾಡಿತು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಸಾಹಿತಿ ಶಾಂತಾ ಜೋಗೇನವರ್, ನಮ್ಮ ದೇಶದ ಸಂಸ್ಕೃತಿ, ಪರಂಪರೆ ಭವಿಷ್ಯತ್ತಿನಲ್ಲಿ ಯುವಕರಿಗೆ ,ಮಕ್ಕಳಿಗೆ ಮಾರ್ಗದರ್ಶನ ನೀಡಿದ ವಿವೇಕಾನಂದ ಹುಟ್ಟುಹಬ್ಬವನ್ನು ಇಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ. ಅದನ್ನು ಯುವ ದಿನಾಚರಣೆ ಎಂದು ಹೇಳಲಾಗುತ್ತದೆ. ಇದನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದರೆ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಮಟೆ ಗ್ರಾಮದ ವೈದ್ಯ ಡಾ. ಪಡಸಲಗಿ ಅವರು, ದೇಶದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಭೌಗೋಳಿಕ ಹಾಗೂ ಧಾರ್ಮಿಕವಾಗಿ ಅನೇಕ ಸಮಸ್ಯೆಗಳು ಕಾಡುತ್ತಿª.É ಅವುಗಳನ್ನು ಹೋಗಲಾಡಿಸಲು ಯುವಜನತೆ ಮುಂದಾಗಬೇಕು ಯುವಕರಿಗೆ ಮತ್ತೊಮ್ಮೆ ವಿವೇಕಾನಂದರಂತಹ ವಾಣಿ, ಸಂದೇಶಗಳು ದಾರಿ ದೀಪವಾಗುತ್ತದೆ. ವಿವೇಕಾನಂದರು ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾಗಿದ್ದರು. ಇವರ ಸಂದೇಶಗಳು, ಮಾತುಗಳು ದೇಶಾದ್ಯಂತ ಸುತ್ತಾಡಿದ ಅನೇಕ ಕಡೆ ರಾಮಕೃಷ್ಣ ಮಠಗಳಾಗಿ ಜನರಿಗೆ ಧಾರ್ಮಿಕವಾಗಿ ಭಾರತದ ಸನಾತನ ಧರ್ಮ ಕುರಿತು ಸಾರುತ್ತಿವೆ ಎಂದರು

ಬಸು ಶಾಸ್ತ್ರಿ, ಬಸು ತೊನಶ್ಯಾ¼, ಪ್ರಶಾಂತ ಕೆ. ಹೀನಾ ಇನಾಮದಾರ, ಸಂತೋಷ ಮುಂತಾದವರು ಭಾಗವಹಿಸಿದ್ದರು.