ಸನಾತನ ಧರ್ಮ ಬಹಳೇ ಆದಿಕಾಲದ್ದು:ಜೋಶಿ

ತಾಳಿಕೋಟೆ:ಜೂ.4: ಭಾರತ ದೇಶದಲ್ಲಿ ಹಲವಾರು ಮತ-ಪಂತಗಳು ಇದ್ದರೂ ವಿಶೇಷವಾಗಿ ಶ್ರೇಷ್ಠವಾದ ಧರ್ಮವೆಂದರೆ ಅದು ಹಿಂದೂ ಧರ್ಮ ಇದಕ್ಕೆ ಸಾವಿರಾರು ವರ್ಷಗಳ ಸನಾತನ ಧರ್ಮದ ಇತಿಹಾಸವಿದೆ ಎಂದು ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ನುಡಿದರು.
ರವಿವಾರರಂದು ಸ್ಥಳೀಯ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯವರ ವತಿಯಿಂದ ಶ್ರೀ ಅಂಬಾಭವಾನಿ ಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಸಾಯಿ ಬಾಬಾ ವಸಂತೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಇಂತಹ ಮಹತ್ವದ ಸನಾತನ ಧರ್ಮವನ್ನು ಈ ಆಳ್ವಿಕೆ ಮಾಡಿದವರು ನಾಶ ಮಾಡಲು ಬಂದು ಈ ದೇಶದ ಸಂಸ್ಕøತಿಯನ್ನು ಹಾಳು ಮಾಡಬೇಕೆಂದು ಪ್ರಯತ್ನಿಸಿದರೂ ಅದು ಹಾಳಾಗಲಿಲ್ಲಾ ಸೂರ್ಯ, ಚಂದ್ರ, ಅಗ್ನಿ ಪೂಜಿಸುವ ಸಂಸ್ಕøತಿ ನಮ್ಮದಾಗಿದೆ ಶಂಕರಾಚಾರ್ಯರು ಜನ್ಮ ತಾಳಿದ ನಂತರ ಈ ನಮ್ಮ ಸಂಸ್ಕøತಿ ಉಳಿಸಿ ಬೆಳೆಸಲು ಅನುವು ಮಾಡಿಕೊಟ್ಟರೆಂದರು. ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿಬಂದು ಈ ಹಿಂದೂ ಧರ್ಮವನ್ನು ಉಳಿಸಿದರು ತಾಯಿ ಜೀಜಾಬಾಯಿಯ ಅಪೇಕ್ಷೆಯಂತೆ ಶೂರನಾದ ಶಿವಾಜಿ ಮಹಾರಾಜರು ತಾಯಿಯ ಕನಸ್ಸು ನನಸ್ಸು ಮಾಡಿದರೆಂದರು. ನಮ್ಮ ದೇಶದ ಸಲುವಾಗಿ ಅನೇಕ ಜನರು ಪ್ರಾಣ ತೆತ್ತಿದ್ದಾರೆ ಧರ್ಮ ಜಾಗೃತಿಯಾಗಿದೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯಾಗಿ 500 ವರ್ಷಗಳ ಇತಿಹಾಸ ನೆನಪಿಸಿದೆ ಎಂದರು. ಗೋದಾವರಿ ನಧಿ ತೀರದಲ್ಲಿ ಶಿರಡಿ ಅನ್ನುವಂತಹ ಕ್ಷೇತ್ರದಲ್ಲಿ ಬಾಲಕನ ವೇಷದಿಂದ ಬಂದ ಸಾಯಿಬಾಬಾರವರು ಸರ್ವಸಂಗ ಪರಿತ್ಯಾಗಿಯಾಗಿ ಅವರು ಹೇಳಿದ ಹಾಗೆ ಅಂದದ್ದು ಅಂದಹಾಗೆ ಆಗುತ್ತಾ ಸಾಗುತ್ತಿತ್ತು ಯಾವ ರೀತಿ ಬಂದು ಬಳಗವಿಲ್ಲದೇ ಸಾಯಿಬಾಬಾರಿದ್ದರೋ ಹಾಗೆ ನರೇಂದ್ರ ಮೋದಿ ಅವರು ದೇಶ ವ್ಯಾಪಿ ಜನರಿಗಾಗಿ ಶ್ರಮಿಸುತ್ತಿದ್ದಾರೆ ಇಂತಹ ಶ್ರೀಗಳು ಜನ್ಮ ಭಾರತ ದೇಶದಲ್ಲಿ ಜನ್ಮ ತಾಳಿದ್ದರಿಂದ ಭಾರತ ದೇಶ ವಿಶ್ವಗುರು ಆಗಿದೆ ಎಂದರು.
ಇನ್ನೋರ್ವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ವೇ.ವಸಂತ ಜೋಶಿ ಅವರು ಮಾತನಾಡಿ ಸಾಯಿಬಾಬಾರವರಾಗಲಿ ಸ್ವಾಮಿ ಸಮರ್ಥರಾಗಲಿ ಇವರೆಲ್ಲರಿಗೂ ದತ್ತಾವತಾರಿಗಳು ಎಂದು ಹೇಳಲಾಗುತ್ತದೆ ಈ ಎಲ್ಲ ಸಂತರು ಮಾಡಿದ ಪವಾಡಗಳು ಜರುಗುತ್ತವೆ ಪವಾಡಗಳಿಗೆ ಹುಟ್ಟು ಸಾವುಗಳಿಲ್ಲಾ ಹಾಗೆಯೇ ಪವಾಡಗಳು ಜರುಗುತ್ತಾ ಸಾಗಿಬಂದಿವೆ ಎಂದರು. ಸಂತರ ಸಂದೇಶಗಳು ಸಾವಿರಾರು ಇವೆ ಎಂದು ಹೇಳಿದ ಜೋಶಿ ಅವರು ಬ್ರಹ್ಮ ಸೂತ್ರ ಸರಳ ಸಂದೇಶ ಕುರಿತು ವಿವರಿಸಿದ ಅವರು ನಗು ನಗುತ್ತಾ ಸಂಪತ್ತು ಇದ್ದರೆ ಎಲ್ಲರೂ ಬರುತ್ತಾರೆ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದಿರಿ ಎಂದು ಶ್ರೀ ರಾಮಚಂದ್ರನ ಇತಿಹಾಸವನ್ನು ವಿವರಿಸಿ ಮನವರಿಕೆ ಮಾಡಿದರು.
ಇನ್ನೋರ್ವ ಶ್ರೀ ಅಂಬಾಭವಾನಿ ಮಂದಿರದ ಅರ್ಚಕರಾದ ವೇ.ಭೀಮಾಶಂಕರ ಗುರೂಜಿ ಅವರು ಮಾತನಾಡಿ ಗುರುಗಳ ಸೇವೆ ದೇವ ಭಕ್ತಿ ಎಂಬವುಗಳು ಸಾಮಾನ್ಯವಲ್ಲಾ ಆ ಭಕ್ತಿ ಎಂಬುದು ಎಲ್ಲರಲ್ಲಿ ಬರಬೇಕೆಂದರು. ದೇವರನ್ನು ಗುರುವಿನ ರೂಪದಲ್ಲಿ ಕಾಣಬಹುದು ಮಹಾತ್ಮರು, ಸಂತರು, ಸತ್ಪುರುಷರು, ಸಂತ ತುಕಾರಾಮ ಮಹಾರಾಜ, ಸಾಯಿಬಾಬಾರವರು, ಸದಾನಂದ ಮಹಾರಾಜರು, ಭೀಮಾಶಂಕರರು ಇವರೆಲ್ಲರೂ ದತ್ತಾವತಾರಿಗಳಾಗಿದ್ದರೆಂದರು. ಗುರು ನಾಮ ಸ್ಮರಣೆಯಿಂದ ಫಲ ದೊರೆಯುತ್ತದೆ ಈ ಸ್ಮರಣೆ ಎಂಬುದು ಬ್ಯಾಂಕಿನಲ್ಲಿ ಡಿಫಾಜಿಟ್ ಇಟ್ಟಂತೆ ಸತ್ಸಂಗ ನಾಮ ಸ್ಮರಣೆ ಮಾಡಬೇಕು ರಾಮ ಎಂದರೆ ನಾಮ ಸ್ಮರಣೆಯಾಗುತ್ತದೆ ರಾಮ ಎಂದರೆ ಕೆಟ್ಟದ್ದು ಹೊರಗೆ ಹೋಗಿ ಶುದ್ದವಾದುದ್ದು ದೇಹದಲ್ಲಿ ಬರುತ್ತದೆ ಎಂದರು. ಭಕ್ತಿ ಎನ್ನುವದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಕುರಿತು ತಾಯಿ ಕೌಶಲ್ಯ ರಾಮನ ಸಮುದ್ರ ರಾಜನ ಮೇಲಿಟ್ಟ ಪ್ರೀತಿ ಕುರಿತು ಕಥೆಯೊಂದನ್ನು ವಿವರಿಸಿದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ತಾಳಿಕೋಟೆಯಲ್ಲಿ ಸಾಯಿಬಾಬಾ ಅನ್ನುವಂತಹ ಮಂದಿರ ಸುಮಾರು 3 ಮಂದಿರಗಳು ನಿರ್ಮಾಣಗೊಳ್ಳುತ್ತಾ ಸಾಗಿವೆ ಈ ಸಾಯಿಬಾಬಾನ ಭಕ್ತರು ಸಾಯಿ ಬಾಬಾರವರ ಮೇಲಿಟ್ಟ ಪ್ರೀತಿ ಭಕ್ತಿಯೇ ಕಾರಣವಾಗಿದೆ ಎಂದರು. ವಸಂತೋತ್ಸವ ಕಾರ್ಯಕ್ರಮವೆಂಬುದು ಕೇವಲ ಇಂದು ತಾಳಿಕೋಟೆಯಲ್ಲಿ ಅಷ್ಟೇ ನಡೆದಿಲ್ಲಾ ಇದು ದೇಶ ವ್ಯಾಪ್ತಿ ನಡೆದಿದೆ ದೇಶ ವ್ಯಾಪ್ತಿಯೂ ಶ್ರೀ ಸಾಯಿಬಾಬಾರವರ ಮಹಾ ಪೂಜಾ ಕಾರ್ಯಕ್ರಮ ನಡೆಯುವ ದಿನ ಇಂದಾಗಿದೆ ಎಂದು ಹೇಳಿದ ಅವರು ಸಾಯಿಬಾಬಾರವರ ಪವಾಡಗಳ ಕುರಿತು ಅವರು ಮಾಡಿದ ಭಕ್ತೋದ್ದಾರ, ಜನೋದ್ದಾರ ಕುರಿತು ಪ್ರಚಾರ ಪಡಿಸುತ್ತಾ ಸಾಗಿದ ಆನಂದ ಕುಲಕರ್ಣಿ ಅವರ ಸೇವಾ ಕಾರ್ಯ ಮಹತ್ವದ್ದಾಗಿದೆ ಎಂದರು.
ವೇದಿಕೆ ಮೇಲೆ ಭಾವಸಾರ ಕ್ಷತ್ರೀಯ ಸಮಾಜದ ಹಿರಿಯರಾದ ಎಲ್.ವ್ಹಿ.ಮಹೇಂದ್ರಕರ, ಶ್ರೀಧರ ಗ್ರಾಂಪೊರೊಹಿತ, ವಿಜಯ ಮಹೇಂದ್ರಕರ, ನಾಗೇಶ ಮಹೇಂದ್ರಕರ, ಆನಂದ ಕುಲಕರ್ಣಿ, ಸತೀಶ ದಪ್ತೆದಾರ, ದತ್ತಾ ಮಹೇಂದ್ರಕರ, ತಿಳಗೂಳ ಸರ್, ಹಾಗೂ ಮಾತೆಯರು ಉಪಸ್ಥಿತರಿದ್ದು ಸಾಯಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.