ಸನಾತನ ಧರ್ಮವನ್ನು ವಿಶ್ವವ್ಯಾಪ್ತಿಗೆ ವೈಭವೀಕರಿಸಿದ ದೇಶ ಭಾರತ-  ಓಂಕಾರ ಶಿವಾಚಾಚಾರ್ಯ ಶ್ರೀ

ಸಂಜೆವಾಣಿ ವಾರ್ತೆ

ದಾವಣಗೆರೆ, ಜು.೨೫; ನಮ್ಮ ಸಂಸ್ಕೃತಿ, ಸಂಸ್ಕಾರ, ಸನಾತನ, ಧಾರ್ಮಿಕ, ಐತಿಹಾಸಿಕ ಪರಂಪರೆಯನ್ನು ವಿಶ್ವವ್ಯಾಪ್ತಿಯಲ್ಲಿ ವೈಭವೀಕರಿಸಿದ ದೇಶ ನಮ್ಮ ಭಾರತ. ಅದರಲ್ಲೂ ನಮ್ಮ ಕನ್ನಡ ನಾಡು-ನುಡಿಯ ಜತೆಯಲ್ಲಿ ಆಧ್ಯಾತ್ಮಗಳ ಅರಿವು ಮುಂದಿನ ಪೀಳಿಗೆಗಳಿಗೆ ಅರಿವು ಮೂಡಿಸುವ ದಾವಣಗೆರೆಯ ಶ್ರೀ ಗಾಯತ್ರಿ ಪರಿವಾರ ಸಂಘಟನೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಹೋಮ, ಹವನ, ಪೂಜೆ, ಪುನಸ್ಕಾರ ಕ್ರಮಬದ್ದವಾಗಿ ಅಚ್ಚುಕಟ್ಟಾಗಿ ಶಿಸ್ತು ಬದ್ದವಾಗಿ ನಡೆಸಿದಾಗಿ ಈ ಧಾರ್ಮಿಕ ಕಾಯಕಕ್ಕೆ ಸಾರ್ಥಕತೆ ಬರುತ್ತದೆ ಲೋಕಕಲ್ಯಾಣಕ್ಕಾಗಿ ಭಗವಂತನ ಕೃಪೆಗಾಗಿ ಸರ್ವೇಜನಃ ಸುಖಿನವಬವಂತುವಾಗಲು ಸಾಲಿಗ್ರಾಮ ಗಣೇಶ್ ಶೆಣೈಯವರ ಸಾರಥ್ಯದಲ್ಲಿ ಸುಂಸಪನ್ನಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಅವರಗೊಳ್ಳ ಶ್ರೀ ಕ್ಷೇತ್ರ ಪುರವರ್ಗ ಹಿರೇಮಠದ ಶ್ರೀ ಶ್ರೀ ಓಂಕಾರ ಶಿವಾಚಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಮ್ಮ ಅನಿಸಿಕೆ ಹಂಚಿಕೊAಡರು.ನಗರದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ನಿನ್ನೆ ದಿನ ದಾವಣಗೆರೆಯ ಶ್ರೀ ಗಾಯತ್ರಿ ಪರಿವಾರ ಹಮ್ಮಿಕೊಂಡAತ ಶ್ರೀ ಗಾಯತ್ರಿ ಯುಜ್ಞ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗಳ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ವೇದಶಾಸ್ತç ತಜ್ಞರು, ಹಿರಿಯ ಪುರೋಹಿತರಾದ ವೇ. ಎಸ್. ಶಂಕರ ನಾರಾಯಣ ಶಾಸ್ತ್ರಿ, ಬೆಂಗಳೂರಿನ ಸಿದ್ದಿ ಸಮಾಧಿ ಯೋಗ ಸಮಿತಿಯ ದಾವಣಗೆರೆ ಜಿಲ್ಲಾ ಮುಖ್ಯಸ್ಥರಾದ ಶ್ರೀಮತಿ ರೇಣುಕಮ್ಮ ಮಾತಾಜೀ, ವಿದೇಶದಿಂದ ಆಗಮಿಸಿದ ಮಾರಿಕಾಸ್ ಶ್ರೀ ವೆಂಕಟೇಶ್ವರ ಆಶ್ರಮದ 6ನೇ ತಲೇಮಾರಿನ ಸ್ವಾಮಿಗಳಾದ ಶ್ರೀ ಸುದರ್ಶನ ದೇವೆಂದ್ರ ಅಪ್ಪಯ್ಯ ಗುರುಜೀಯವರು, ದಾವಣಗೆರೆ ಪಾಟೀದಾರ ಸಮಾಜದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್, ಪರಿವಾರದ ಗೌರವಾಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮಾತನಾಡಿ ಅಧಿಕ ಶ್ರಾವಣ ಮಾಸದ ಈ ಶುಭ ಮುಹೂರ್ತದಲ್ಲಿ ಇಂತಹ ಪವಿತ್ರ ವೈಶಿಷ್ಟಪೂರ್ಣ ಧಾರ್ಮಿಕ ಕಾರ್ಯಕ್ರಮ ಇಟ್ಟುಕೊಂಡಿದ್ದು ಎಲ್ಲಾ ಸಮುದಾಯದವರಿಗೆ ಶ್ರೇಯಸ್ಸು ಅಭಿವೃದ್ಧಿಗೆ ಭದ್ರವಾದ ಬುನಾದಿ ಎಂದರು.ಸಮಾರAಭದ ಅಧ್ಯಕ್ಷತೆಯನ್ನು ಪರಿವಾರದ ಅಧ್ಯಕ್ಷೆ ಡಾ.ಸುಶೀಲಮ್ಮ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಆಧ್ಯಾತ್ಮ ಸಂಸ್ಕಾರ, ಸಂಪ್ರದಾಯಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ. ಇಂತಹ ಧಾರ್ಮಿಕ ಪರಂಪರೆಯ ಸಮಾರಂಭಗಳಿAದ ಮುಂದಿನ ಪೀಳಿಗೆಗೆ ಆಧ್ಯಾತ್ಮದ ಅರಿವು ಮೂಡಿಸುವುದರಿಂದ ಈ ಕಾರ್ಯಕ್ರಮಕ್ಕೆ ಶ್ರೇಯಸ್ಸು ಬರುತ್ತದೆ ಎಂದರು.ಶ್ರೀ ಗಾಯತ್ರಿ ಹೋಮ, ಶ್ರೀ ಸತ್ಯನಾರಾಯಣ ಸಾಮೂಹಿಕ ಪೂಜೆಗೆ ಸಂಕಲ್ಪ ಮಾಡಿ ಸೇವೆ ಸಲ್ಲಿಸಿದ ಸದ್ಭಕ್ತರಿಗೆ ಮತ್ತು ಅವರ ಕುಟುಂಬಕ್ಕೆ ಶ್ರೀ ಗಾಯತ್ರಿ ದೇವಿಯ ಸ್ಮರಣಿಕೆ, ಪೂಜಾ ಕಳಸ, ಶ್ರೀ ಸತ್ಯನಾರಾಯಣ ದೇವರ ಬಿಲ್ಲೆ ವಿತರಿಸಲಾಯಿತು.ಬಾಲಪ್ರತಿಭೆ ಆಯಿಷ್ಯಕೃಷ್ಣ ಪ್ರಭುವಿನ ಭಗವದ್ಗೀತೆಯ ಶ್ಲೋಕದ ಪ್ರಾರ್ಥನೆಯೊಂದಿಗೆ ಪ್ರಾರಂAಭವಾದ ಈ ಸಮಾರಂಭಕ್ಕೆ ಶ್ರೀಮತಿ ಶೈಲಾ ವಿನೋದ್ ದೇವರಾಜ್ ಸ್ವಾಗತಿಸಿದರು, ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿ ಪರಿವಾರದ ಕುರಿತು ಪ್ರಾಸ್ತಾವನೆಯಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು.