ಸನಾತನ ಧರ್ಮದ ಬಗ್ಗೆ ಮಾತನಾಡಿಲ್ಲ: ಪರಮೇಶ್ವರ್

ಹುಬ್ಬಳ್ಳಿ, ಸೆ8: ನಾನು ಸನಾತನ ಧರ್ಮದ ಬಗ್ಗೆ ಮಾತನಾಡಿಲ್ಲ ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯ ಸಂದರ್ಭದಲ್ಲಿ ಏನು ಹೇಳಬೇಕೋ ಹೇಳಿದ್ದೇನೆ, ಬೇರೆಯವರ ವಿಶ್ಲೇಷಣೆಗೆ ನಾನು ಉತ್ತರ ಕೊಡುವುದಿಲ್ಲ ಎಂದು ನುಡಿದರು.
ಬಿ.ಜೆ.ಪಿ.ಗೆ ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ, ಲೋಕಸಭಾ ಚುನಾವಣೆಯಲ್ಲೂ ಕೊಡುತ್ತಾರೆ ಎಂದು ಅವರು ಹೇಳಿದರು.
ಬರಗಾಲ: ಬರಗಾಲದ ಕುರಿತಂತೆ ಈಗಾಗಲೇ ಚರ್ಚೆಯಾಗಿದೆ, ಕೇಂದ್ರಕ್ಕೂ ವರದಿ ಕಳಿಸಲಾಗುತ್ತಿದೆ ಎಂದ ಅವರು, ಕ್ಯಾಬಿನೆಟ್ ಸಬ್ ಕಮಿಟಿಯ ಚರ್ಚೆಯಲ್ಲಿ ಕೆಲವೇ ತಾಲೂಕುಗಳನ್ನು ಶಿಫಾರಸು ಮಾಡಿದ್ದು ಅದನ್ನು ಪುನರ್ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರವೇ ಬರಗಾಲದ ಘೋಷಣೆಯಾಗಲಿದೆ ಎಂದು ತಿಳಿಸಿದರು.