ಸನಾತನ ಧರ್ಮದ ಪ್ರಾಮುಖ್ಯತೆ ದೇಶಾದ್ಯಂತ ಹರಡುವಂತೆ ಮಾಡಿರುವವರೇ ಆದಿ ಜಗದ್ಗುರು ಶಂಕರಾಚಾರ್ಯರು: ರವೀಂದ್ರನಾಥ

ಬೀದರ:ಮೇ.14:ಆದಿ ಜಗದ್ಗುರು ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿ ಇಡೀ ಭಾರತ ದೇಶಾದ್ಯಂತ ಹಿಂದೂ ಧರ್ಮದ ಪ್ರಾಮುಖ್ಯತೆಯನ್ನು ತಿಳಿಸಿ ಅದನ್ನು ವಿಶ್ವ ವ್ಯಾಪ್ತಿಗೆ ಹರಡುವಂತೆ ಮಾಡಿದ ಮಹಾನ್ ಜಗದ್ಗುರುಗಳು ಎಂದು ಮಲ್ಕಾಜ್ ಗಿರಿಯ ವಿಎಚಪಿ ಹಾಗೂ ಆರ ಎಸ್ ಎಸ್ ನ ಪ್ರಮುಖರಾದ ರವಿಂದ್ರನಾಥಜಿ ಯವರು ಅಭಿಪ್ರಾಯಪಟ್ಟರು.
ಅವರು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ, ಸಿಕಂದರಾಬಾದ ನ ಮಲ್ಕಾಜ ಗಿರಿಯಲ್ಲಿ ಏರ್ಪಡಿಸಲಾದ ಆದಿ ಜಗದ್ಗುರು ಶಂಕರಚಾರ್ಯರವರ ಜಯಂತೋತ್ಸವ ಹಾಗೂ ವಿಶ್ವ ತಾಯಂದಿರ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆದಿ ಜಗದ್ಗುರು ಶಂಕರಾಚಾರ್ಯರು ತಮ್ಮ 2ನೇ ವಯಸ್ಸಿನಲ್ಲಿ ವೇದ ಉಪನಿಷತ್ ಗಳನ್ನು ಬಲ್ಲವರಾಗಿದ್ದರು ಅಂತಹ ಪುಟ್ಟ ಬಾಲಕ ಇದ್ದಾಗಲೇ ಜ್ಞಾನವನ್ನು ಹೊಂದಿರುವ ಶ್ರೀ ಶಂಕರಾಚಾರ್ಯರು ಶ್ರೀಮನ್ ನಾರಾಯಣ ಅವತಾರ ಪುರುಷರೆಂದು ಹೇಳಲಾಗುತ್ತದೆ ಎಂದು ನುಡಿದರು.
ಹಿರಿಯರಾದ ಶ್ರೀ ಗಿರಿಧರ್ ಆಚಾರ್ಯಜಿ ಯವರು ಮಾತನಾಡುತ್ತಾ,
ಭಾರತ ದೇಶದಲ್ಲಿ ಜಾತಿ, ಮತ, ಪಂಥ, ಅಸ್ಪ್ರಶ್ಯತೆ ಇವುಗಳೆಲ್ಲವನ್ನು ಹೋಗಲಾಡಿಸಲು ಎಲ್ಲಾ ಮತ-ಪಂಥಗಳ ಜನರನ್ನು ಒಗ್ಗೂಡಿಸಿ ನಾವೆಲ್ಲರೂ ಹಿಂದೂಗಳು ಎಂದು ಎಲ್ಲರಲ್ಲಿ ಸಮಾನತೆ ಪ್ರೀತಿ ಪ್ರೇಮ ಭಾವೈಕ್ಯತೆಯನ್ನು ಬಿತ್ತಿರುವಂತಹ ಮಹಾನ್ ಸಂತರು. ಶ್ರೀ ಶ್ರೀ ಶಂಕರಾಚಾರ್ಯರು ತಮ್ಮ 7ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿದರು. ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಅದ್ವೈತ ವೇದಾಂತ ಸಿದ್ಧಾಂತದ ಶ್ರೇಷ್ಠ ಪ್ರತಿಪಾದಕರು ಮತ್ತು ವೈದಿಕ ಧರ್ಮದ ಸಂರಕ್ಷಕರು, ಭಾರತೀಯ ತತ್ವಶಾಸ್ತ್ರವನ್ನು ಉತ್ತುಂಗಕ್ಕೆuಟಿಜeಜಿiಟಿeಜರಿಸಿದ ಮಹಾನರು ಎಂದು ನುಡಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು ಮಾತನಾಡಿ,
ಹಿಂದೂ ಧರ್ಮವನ್ನು ವಿರೋಧಿಸುವವರು ಅಂದಿನ ಕಾಲದಲ್ಲಿ ಇಂದಿಗಿಂತಲೂ ಹೆಚ್ಚು ಜನರಿದ್ದರು. ಆದರೆ ಶಂಕರಾಚಾರ್ಯರು ಅವರೆಲ್ಲರಿಗೆ ಅತ್ಯಂತ ಮಾರ್ಮಿಕವಾಗಿ ಹಿಂದುತ್ವದ ಬಗ್ಗೆ ಸನಾತನ ಧರ್ಮ ವೈದಿಕ ಪರಂಪರೆ ಭಾರತೀಯ ವೈಶಿಷ್ಟತೆ ಇವುಗಳೆಲ್ಲವನ್ನು ಸಂಪೂರ್ಣವಾಗಿ ತಿಳಿಸುತ್ತಾ, ದೇಶಾದ್ಯಂತ ಮನುಕುಲದ ಉದ್ಧಾರಕ್ಕಾಗಿ ಸತ್ಯಾಂಶವನ್ನು ಜನರಿಗೆ ತಿಳಿಸುತ್ತಿದ್ದರು. ಇಂತಹ ಮಹಾನ್ ಸಂತರ ಆಗಮನ ಇಂದು ಅತ್ಯವಶ್ಯಕವಾಗಿದೆ ಎಂದು ನುಡಿದರು. ಮುಂದುವರೆದು ಮಾತನಾಡಿ,
ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಬ್ರಹ್ಮ ವಿಷ್ಣು ಮಹೇಶ್ವರನ ಅವತಾರ ಪುರುಷರು ಅವರು ಈ ಭೂಮಿಯ ಮೇಲೆ ಸಕಲ ಜೀವಿಗಳ ಉದ್ಧಾರಕ್ಕಾಗಿ ಅವತರಿಸಿರುವ ಮಹಾನ್ ದಾರ್ಶನಿಕ ಸಂತರು. ಧರ್ಮೋ ರಕ್ಷತಿ ರಕ್ಷಿತ: ಇಂದಿನ ಯುವ ಪೀಳಿಗೆಯು ಭಾರತೀಯ ಸಂಸ್ಕøತಿ ಮರೆತು ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸುತ್ತಿರುವುದು Àಖೇದಕರ. ಸ್ವಾಮಿ ವಿವೇಕಾನಂದರ, ರಾಮಕೃಷ್ಣ ಪರಮಹಂಸರ ಮಹಾನ್ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಭಗವದ್ಗೀತೆ ರಾಮಾಯಣ ವೇದ ಉಪನಿಷತ್ ಗಳ ಬಗ್ಗೆ ಅಧ್ಯಯನವನ್ನು ಮಾಡಬೇಕು. ನಮ್ಮ ದೇಶ ನಮ್ಮ ಸಂಸ್ಕೃತಿ ವಿಶ್ವಕ್ಕೆ ಮಾದರಿ ಎನ್ನುವುದನ್ನು ಮತ್ತೆ ಎಲ್ಲರೂ ಸಾಬೀತುಪಡಿಸಬೇಕು ಎಂದು ತಿಳಿಸಿದರು. ತಾಯಂದಿರ ಕುರಿತ ಜಾನಪದ ಗೀತೆಯನ್ನು, ವೀರಭದ್ರಪ್ಪ ಉಪ್ಪಿನರವರು ಹಾಡಿದರು. ಹಿರಿಯ ಮಕ್ಕಳ ರೋಗ ತಜ್ಞರಾದ ಡಾ ಸಿ. ಆನಂದರಾವ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದತ್ತಾತ್ರಯರಾವ ಕುಲಕರ್ಣಿ, ರಾಮರಾವ ದೇಶಪಾಂಡೆ, ಚಂದ್ರಕಾಂತ ಕುಲಕರ್ಣಿ, ದಿಲೀಪಕುಮಾರ್, ಲಕ್ಮಿಕಾಂತ ಶರ್ಮಾ, ಮುಂತಾದವರು ಹಾಜರಿದ್ದರು.