ಕಲಬುರಗಿ:ಸೆ.28: ಕ್ಷಾತ್ರ ಪರಂಪರೆಯನ್ನು ಹೊಂದಿರುವಂತಹ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಯೊಬ್ಬ ಹಿಂದೂ ಸಂಘಟಿತರಾಗುವ ಅವಶ್ಯಕತೆಯಿದೆ.ಹೀಗಾದಾಗ ಮಾತ್ರ ಸನಾತನ ಧರ್ಮದ ಉಳಿವು ಸಾಧ್ಯವಿದೆ ಎಂದು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಅಭಿಮತ ವ್ಯಕ್ತಪಡಿಸಿದರು.
ಬುಧವಾರ ಅವರು ನಗರದ ಕೋಟೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಅಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ ಸನಾತನ ಧರ್ಮದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿ, ಸನಾತನ ಧರ್ಮದ ನಿರ್ಮೂಲನೆ ಮಾಡಬೇಕೆಂದು ಮತಾಂತರಗೊಂಡ ಕೆಲವು ಅವಿವೇಕಿಗಳು ಮಾತನಾಡುತ್ತಿದ್ದಾರೆ.ಆದರೆ, ಎಲ್ಲಿಯವರೆಗೆ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಷಸುತ್ತದೆಯೋ ಮತ್ತು ಎಲ್ಲಿಯವರೆಗೂ ಪ್ರಕೃತಿ ಜೀವಂತವಾಗಿ ಇರಲಿದೆಯೋ,ಅಲ್ಲಿಯವರೆಗೆ ಸನಾತನ ಹಿಂದೂ ಧರ್ಮ ಶಾಶ್ವತವಾಗಿ ಉಳಿಯಲಿದೆ ಎಂದರು.
ಸನಾತನ ಧರ್ಮವು ಶಾಶ್ವತವಾಗಿ ಉಳಿಯಲಿದೆ ಎಂದು ಶ್ರೀ ಕೃಷ್ಣ ಪರಮಾತ್ಮನೆ ಹೇಳಿರುವಾಗ, ಎರಡು ಕೆಜಿ ಅಕ್ಕಿಗೆ ಮತಾಂತರಗೊಂಡಂತ ತಮಿಳುನಾಡಿನ ರಾಜಕೀಯ ಮುಖಂಡ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.ಸನಾತನ ಧರ್ಮ,ಹಿಂದೂ ಸಂಸ್ಕೃತಿಯನ್ನು ಯಾರಿಂದಲೂ ನಿಮೂ೯ಲನೆ ಮಾಡಲು ಸಾಧ್ಯವಿಲ್ಲ ಎಂದರು.
ಸನಾತನ ಧರ್ಮದ ಮೂಲಸತ್ವ ಇರುವುದು ಸೂರ್ಯನ ತೇಜದ ಪ್ರಖರತೆಯಲ್ಲಿ, ಇಂತಹ ಸನಾತನ ಧರ್ಮದ ನಿಮೂ೯ಲನೆಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಡೀ ವಿಶ್ವವೇ ಹಿಂದೂ ಧರ್ಮದ ಆಚಾರ-ವಿಚಾರ,ಸಂಸ್ಕೃತಿ ಸ್ವೀಕಾರ ಮಾಡುತ್ತಿವೆ.ಭಾರತದ ಮೇಲೆ ಎಷ್ಟೋ ದಾಳಿಗಳು ನಡೆದರೂ,ಸನಾತನ ಧರ್ಮವನ್ನು ನಾಶಪಡಿಸಲು ಆಗಲಿಲ್ಲ. ಹೀಗಾಗಿ ಸನಾತನ ಧರ್ಮದ ನಿಮೂ೯ಲನೆ ಮಾಡಬೇಕೆಂಬ ವ್ಯಕ್ತಿಗಳಿಗೆ ಅವರದ್ದೆಯಾದ ದಾಟಿಯಲ್ಲಿ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದ ಅವರು,ಹಿಂದೂ ಸಮಾಜದ ಬಾಂಧವರು ಸಂಘಟಿತರಾಗಿ ಸನಾತನ ಧರ್ಮದ ರಕ್ಷಣೆ ಮಾಡಬೇಕೆಂದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ನಾಗೇಂದ್ರ ಕಾಬಡೆ ಪ್ರಾಸ್ತಾವಿಕವಾಗಿ ಮಾತನಾಡಿ,ಕಳೆದ ನಾಲ್ಕು ದಶಕಗಳಿಂದ ಹಿಂದು ಜಾಗರಣ ವೇದಿಕೆ ಹಿಂದೂ ಸಮಾಜವನ್ನು ಒಗ್ಗೂಡಿಸಿವಂತಹ ಕಾಯ೯ದಲ್ಲಿ ತೊಡಗಿದೆ.ಕಳೆದ ಎರಡು ವರ್ಷಗಳಿಂದ ವೇದಿಕೆ ಅಡಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಕೆಲಸ ನಡೆದಿದ್ದು,ನಿರಂತರವಾಗಿ ಪ್ರತಿ ವರ್ಷ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಘೋಷ ವಾದ್ಯಗಳೊಂದಿಗೆ ಗಣೇಶ್ ವಂದನ ಕಾಯ೯ಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಚೌದರಿ, ಮಂಜುನಾಥ ಪವಾರ್,ರುದ್ರಪ್ಪಾ ಗಾಂಜಿ, ಶ್ರೀಮತಿ ಸುಧಾ ಹಾಲಕಾಯಿ,ಖ್ಯಾತ ಉದ್ಯಮಿ ಸಂಜು ಗುಪ್ತಾ, ಜಿಲ್ಲಾಧ್ಯಕ್ಷ ನಾಗೇಂದ್ರ ಕಾಬಡೆ, ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಟೆಂಗಳಿ, ಸದಸ್ಯ ರವಿ ಮುತ್ತಿನ, ಮಹೇಶ್ ರಂಗದಾಳ್ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.