ಸಧೃಡ ಶರೀರದಲ್ಲಿ ಸದೃಡ ಮನಸ್ಸು ಇರುತ್ತದೆ: ಶ್ರೀಧರ ನಡಗಡ್ಡಿ

(ಸಂಜೆವಾಣಿ ವಾರ್ತೆ)
ಇಂಡಿ: ಜು.28: ಪಾಠಬೋದನೆಯ ಜೊತೆ ಜೊತೆಗೆ ಸಹ ಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಸದೃಡ ಶರೀರದಲ್ಲಿ ಸದೃಡ ಮನಸ್ಸು ಇರುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ.ಆರ್.ನಡಗಡ್ಡಿ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿರುವ ಸೌ|| ಎ ಜಿ ಗಾಂಧಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ 2022-23ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶಾಲೆಗಳಲ್ಲಿ ಪಠ್ಯಗಳ ಜೊತೆಗೆ ಆಆಟ,ಪಾಠಗಳಿಗೆ ಮಹತ್ವ ನೀಡಬೇಕು. ಕೋಣಿಯ ಕೂಸು ಕೋಳೆಯಿತು ಓಣಿಯ ಕೂಸು ಬೆಳೆಯಿತು ಎಂಬ ನಾಣ್ನುಡಿಯಂತೆ ಮಗುವಿಗೆ ಆಡುತ್ತಾ ನೋಡುತ್ತಾ ಪಾಠಪ್ರವಚನ ಕಲಿಯುವಂತೆ ಮಾಡಬೇಕು. ಕ್ರೀಡೆಗಳು ಶರೀರದ ಮೌಂಸ ಖಂಡಗಳಿಗೆ ಬಲಿಷ್ಠತೆ ನೀಡುತ್ತದೆ ,ಎಲ್ಲಾ ಸಂಪತ್ತು ಖರೀದಿಸಬಹುದು ಶರೀರ ಸಂಪತ್ತು ಖರೀದಿಸುವುದು ಅಸಾಧ್ಯೆ. ಇದರ ಜೊತೆ ವಿಧ್ಯಾಥಿಧಗಳಿಗೆ ಪ್ರಜಾಪ್ರಭುತ್ವ ,ಸಂವಿಧಾನದ ಬಗ್ಗೆ ತಿಳುವಳಿಕೆ ನೀಡಬೇಕೆಂದರು.
ಇನ್ನೋರ್ವ ಅತಿಥಿಗಳಾದ ಎ.ಎಸ್.ಲಾಳಸೇರಿತಾಲೂಕ ದೈಹಿಕ ಪರಿವೀಕ್ಷಕರು ಮಾತನಾಡಿ ವಿದ್ಯಾರ್ಥಿನಿಯರಿಗಾಗಿ ವಿಶೇಷ ಕ್ರೀಡಾಕೋಣೆ ರಚಿಸಿ ಆಡಳಿತ ಮಂಡಳಿಯವರು ಸಧೃಢ ಶರೀರದಲ್ಲಿ ಮಾತ್ರ ಸಧೃಢ ಮನಸ್ಸು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಎಸ್.ಡಿ.ಬಗಲಿ, ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಕುಲಕರ್ಣಿ , ಸಿದ್ದಣ್ಣ ತಾಂಬೆ ಮಾತನಾಡಿದರು.
ರಾಘವೇಂದ್ರ ಕುಲಕರ್ಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಎಮ್ ಎಸ್ ಕಡಣಿ ಶ್ರೀಧರ ಹಿಪ್ಪರಗಿ ಸಿಆರ್‍ಪಿ ಹಾಗೂ ಆರ್.ಸಿ.ಮೇತ್ರಿ ಬಿಆರ್‍ಪಿ ಪ್ರೌಢಶಾಲಾ ವಿಭಾಗ ಹಾಗೂ ಆರ್.ಎಸ್.ಬಗಲಿ ದೈಹಿಕ ಶಿಕ್ಷಕರು, ಶಾಲಾ ಪ್ರಧಾನಮಂತ್ರಿ ಕುಮಾರಿ.ಆರತಿ ವಾಲಿಕಾರ, ಸಭಾಪತಿ ಕುಮಾರಿ ವೈಷ್ಣವಿ ಜಾಮಗೊಂಡಿ ಉಪಸ್ಥಿತರಿದ್ದರು. ಎಚ್.ಬಿ.ಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.