ಸಧೃಡವಾದ ಮನಸ್ಸು ಯಶಸ್ಸಿಗೆ ದಾರಿ: ಡಾ. ಶಂಕರಗೌಡ ಸಿ ಪಾಟೀಲ್.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಹಲವಾರು ಅವಕಾಶಗಳು ಇರುತ್ತವೆ. ಅದರಲ್ಲಿ ಗೆಲವು ಸಾಧಿಸಲು ನಿರ್ಧಿಷ್ಟವಾದ ಚಿಂತನೆ ಮತ್ತು ಪ್ರಯತ್ನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ನಿರ್ವಹಣೆ ಶಾಸ್ತ್ರದಲ್ಲಿ ಹೊಸ ಹೊಸ ಅವಕಾಶಗಳ ಆವಿಷ್ಕಾರ ನಡೆಯಬೇಕು. ಕಲಿಕೆಗಳಲ್ಲಿ ಏನೇ ಕಷ್ಟಗಳು ಬರಲಿ ಕುಗ್ಗದೇ, ಧೃತಿಗೆಡದೆ ಮುನ್ನುಗ್ಗಬೇಕು ಹಾಗಿದ್ದಲ್ಲಿ ಮಾತ್ರ ಜೀವನದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ
ಡಾ. ಶಂಕರಗೌಡ ಸಿ ಪಾಟೀಲ್
ಹೇಳಿದರು.
ಅವರು ನಗರದ  ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ (ಅಕಿಮ್) ಕಾಲೇಜಿನಲ್ಲಿ ಇಂದು  “ಪಾಂಚಜನ್ಯ 2022” ರ  ಒಂದು ದಿನದ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೇಂಟ್ ಪೆಸ್ಟ್ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ವೃತ್ತಿ ಆಧಾರಿತ ಕೌಶಲ್ಯ ಮತ್ತು ಬುದ್ಧಿಶಕ್ತಿಯನ್ನು ಬೆಳಸಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕರಾಗಿ ಬೆಳೆಯಬೇಕೆಂದು ತಿಳಿಸಿದರು. ಇದನ್ನು ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಗಳು ತಪ್ಪದೇ ಪಾಲಿಸಬೇಕು ಎಂದು ಕರೆಕೊಟ್ಟರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಸಣ್ಣಬಸವರಾಜ  ಅಧ್ಯಕ್ಷತೆ ವಹಿಸಿದ್ದರು.  ಸದಸ್ಯರಾದ  ಬಿ. ರವೀಂದ್ರ ನಾಥ,  ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಎಲ್ಲಾರು ಸದುಪಯೋಗ ಪಡಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಲು ಕರೆಕೊಟ್ಟರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ವಿ. ನಾಗರಾಜ ಶರ್ಮ  ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಾ. ಕೆ.ಟಿ.ಗೋಪಿ ಅವರು  ಸ್ವಾಗತಿಸಿದರು. ಡಾ.ಬಿ. ಶೈಲಜ, ಸಹ ಪ್ರಾಧ್ಯಾಪಕರು ನಿರೂಪಿಸಿದರು.  ಇಂದಿನ ಮ್ಯಾನೇಜ್ಮೇಂಟ್ ಪೆಸ್ಟ್ ನಲ್ಲಿ  20 ಕ್ಕಿಂತ ಹೆಚ್ಚು ಪದವಿ ಕಾಲೇಜಿನ ತಂಡಗಳು ಭಾಗವಹಿಸಿವೆ. ಸಹಾಯಕ ಪ್ರಾಧ್ಯಾಪಕರಾದ ಕೆ. ಜ್ಯೋತಿ,  ಬಿ. ದಿವಾಕರ, ಎನ್. ವಿದ್ಯಾಶ್ರೀ ಹಾಗೂ ಬೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು. ಕೀರ್ತನ ವಂದನಾರ್ಪಣೆ ಮಾಡಿದರು

Attachments area