ಸದ್ಯದಲ್ಲೇ ಬರುವೆ -ಮಾಜಿ ಶಾಸಕ ಅನಿಲ್ ಲಾಡ್

ಬಳ್ಳಾರಿ, ಏ.1: ನಗರ ಪಾಲಿಕೆ ಚುನಾವಣೆ ಸಂಬಂಧ ಸದ್ಯದಲ್ಲೇ ಬಳ್ಳಾರಿ‌ ನಗರಕ್ಕೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಆಗಮಿಸುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮಿತಿ ರಚಿಸಿದ್ದು ಅದಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ಕೆಪಿಸಿಸಿ ಅಧ್ಯಕ್ಷರು ನೇಮಕ‌ ಮಾಡಿದ್ದಾರೆ.
ಅವರು ಇನ್ನೆರೆಡು ಮೂರು ದಿನದಲ್ಲಿ ಬಳ್ಳಾರಿ ಬರಲಿದ್ದು ಅವರು ನಡೆಸುವ ಸಭೆಗೆ ಬಂದು ಹಾಜರಾಗುವೆ. ಟಿಕಿಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರನ್ನೂ ಮುಖಂಡರೆಲ್ಲರು ಸೇರಿ ಎಲ್ಲರನ್ನು ಸಂತೈಸಿ ಸೂಕ್ತ, ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆಂದರು.