ಸದ್ಯದಲ್ಲೇ ‘ ಕೈ’ ಪಕ್ಷಕ್ಕೆ ಕೂಡ್ಲಿಗಿ ಬಿಜೆಪಿ ಶಾಸಕ ಎನ್ ವೈ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.28 :- ಕೂಡ್ಲಿಗಿ ಕ್ಷೇತ್ರದಲ್ಲಿ 2023ರ ಚುನಾವಣೆ ಆರಂಭದ ಮೊದಲೇ ರಾಜಕೀಯ ಚದುರಂಗದಾಟ ಅದಲು ಬದಲಾಗುತ್ತಿದ್ದು ಅದರಲ್ಲಿ ಮುಖ್ಯವೆಂಬಂತೆ ಬಿಜೆಪಿ ಸರ್ಕಾರದಲ್ಲಿ ಸಾವಿರರೂ ಕೋಟಿ ರೂ ಅನುದಾನ ತಂದು ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ಸದ್ಯದಲ್ಲೇ ಬಿಜೆಪಿ ತೊರೆದು ತವರು ಪಕ್ಷವಾದ ಕಾಂಗ್ರೆಸ್ ಸೇರಲಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಈ ಹಿಂದೆ ಮೊಳಕಾಲ್ಮುರು ಕ್ಷೇತ್ರದಿಂದ ನಾಲ್ಕು ಬಾರಿ ಹಾಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪಚುನಾವಣೆಯಲ್ಲಿ ಒಂದು  ಕಾಂಗ್ರೇಸ್ ನಿಂದ ಗೆದ್ದು ಶಾಸಕರಾಗಿ, ಆಕಸ್ಮಿಕವೆಂಬಂತೆ ಕಾಂಗ್ರೆಸ್ ಪಕ್ಷ ಮೊಳಕಾಲ್ಮುರು ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಟಿಕೆಟ್ ಕೊಡಲು ನಿರಾಕರಿಸಿದ್ದರಿಂದ ಬಿಜೆಪಿ ಗಾಳದಿಂದ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಯವರ ಆಶಯದಂತೆ ಕೂಡ್ಲಿಗಿ ಕ್ಷೇತ್ರಕ್ಕೆ ಬಿಜೆಪಿ ಟೆಕೆಟ್ ನೀಡಿ ಎನ್ ವೈ ಗೋಪಾಲಕೃಷ್ಣರನ್ನು ಗೆಲ್ಲಿಸಲಾಯಿತು ಆದರೆ ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಗೋಪಾಲಕೃಷ್ಣ ಅವರು ಕುಡಿಯುವ ನೀರು, ಕೆರೆನೀರು ತುಂಬಿಸುವ ಶಾಶ್ವತವಾದ ಸಾವಿರರೂ ಕೋಟಿ ರೂ ಅನುದಾನದ ಯೋಜನೆ ಸೇರಿದಂತೆ ಶಾಲೆ, ರಸ್ತೆ, ಸರ್ಕಾರಿ ಕಟ್ಟಡಗಳು, ವಸತಿಗೃಹಗಳು, ಕೋವಿಡ್ ಸಂದರ್ಭದಲ್ಲಿ  ಆರೋಗ್ಯ ಇಲಾಖೆಗೆ ಬೇಕಾದ ಸಾಮಗ್ರಿಗಳು ಹಾಗೂ ಇತರೆ ಕಾರ್ಯ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಗೋಪಾಲಕೃಷ್ಣ ಅವರು ಬಿಜೆಪಿ ತೊರೆಯುವ ಬಗ್ಗೆ ಕಳೆದೆರಡು ತಿಂಗಳಿಂದ ಕ್ಷೇತ್ರದಲ್ಲಿ ಗುಸುಗುಸು ಸುದ್ದಿ ಎದ್ದಿತ್ತಾದರೂ ಇತ್ತೀಚಿಗೆ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಸಹ ಭಾಗವಹಿಸಿದ್ದರಿಂದ ಬಿಜೆಪಿ ತೊರೆಯುವ ಲಕ್ಷಣ ಕಾಣಲಿಲ್ಲ ಆದರೆ ಇತ್ತೀಚಿಗೆ ಹುರುಳಿಹಾಳ್ ಮೊರಾರ್ಜಿ ವಸತಿ ಶಾಲೆಗೆ ಭೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಕಂಡು ಬಂದ ವಾಸ್ತವ ಹಾಗೂ ದಾವಣಗೆರೆಯಲ್ಲಿ ನಡೆದ ಬಿಜೆಪಿ ಪಕ್ಷದ ಮೋದಿ ಕಾರ್ಯಕ್ರಮಕ್ಕೆ ಹೋಗುವ ವಿಚಾರದಲ್ಲಿ ಶಾಸಕರ ನಡೆ ಸ್ವಲ್ಪ ಬದಲಾಗಿದ್ದು ಆಗಲೇ ಕಾಂಗ್ರೇಸ್ ಸೇರುವ ಬಗ್ಗೆ ಕ್ಷೇತ್ರದಲ್ಲಿ ಹಾಗೂ ಶಾಸಕರ ಆಪ್ತವಲಯದ ಸುದ್ದಿ ಹೊರಬೀಳುತ್ತಿತ್ತು. ಅಲ್ಲದೆ ಐದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಶಾಸಕ ಎನ್ ವೈ ಗೋಪಾಲಕೃಷ್ಣ ಬಿಜೆಪಿ ಸಿದ್ದಂತಾದ ಸಭೆಗಳಿಗೆ ಭಾಗವಸಿದ್ದು ಬಲುಅಪರೂಪವೆಂದು ಹೇಳಬಹುದು. ಒಟ್ಟಿನಲ್ಲಿ ಸದ್ಯದಲ್ಲೇ ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಾಂಗ್ರೇಸ್ ಸೇರುವ ಬಹುತೇಕ ಖಚಿತವೆಂದು ಹೇಳಬಹುದಾಗಿದೆ ಇವರ ಜೊತೆ ಕೆಲ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೇಸ್ ಸೇರುವ ಲಕ್ಷಣಗಳಿವೆ ಇದರಿಂದಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಆನೆ ಬಲ ಬಂದತ್ತಾಗಿದೆ ಎನ್ನುವುದು ಮಾತ್ರ ಸತ್ಯ.