ಸದ್ಭಾವನಾ ಪ್ರಶಸ್ತಿ ಪ್ರದಾನ

ಬಾದಾಮಿ,ಮಾ12: ತಾಲೂಕಿನ ಹೊಸೂರು ಗ್ರಾಮದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಅನಸೂಯಾ ಯಲಿಗಾರ ಹಾಗೂ ಗದಗ ಸಾರಿಗೆ ಇಲಾಖೆಯ ಭದ್ರತಾ ಸಿಬ್ಬಂದಿ ಸಾವಿತ್ರಿ ಯಲಿಗಾರ ಇವರಿಗೆ ಗದಗ ನಗರದ ಡಾ.ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿμÁ್ಠನ ಹಾಗೂ ಅಶ್ವಿನಿ ಪ್ರಕಾಶನ ವತಿಯಿಂದ ಪಂಡಿತ ಪುಟ್ಟರಾಜ ಗವಾಯಿಗಳ 109 ನೇ ಜಯಂತಿ ಅಂಗವಾಗಿ ಗದಗ ನಗರದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಪುಟ್ಟರಾಜ ಸದ್ಭಾವನಾ ಪ್ರಶಸ್ತಿ”ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ವ್ಹಿ.ವ್ಹಿ. ಹಿರೇಮಠ, ಗೌರವಾಧ್ಯಕ್ಷ ಡಾ. ಕಲ್ಲಯ್ಯಜ್ಜನವರು ಪೀಠಾಧಿಪತಿಗಳು ವಿರೇಶ್ವರ ಪುಣ್ಯಾಶ್ರಮ ಗದಗ ಉಪಾಧ್ಯಕ್ಷ ಪುಟ್ಟರಾಜಸ್ವಾಮಿ ಹಿರೇಮಠ, ಕಾರ್ಯಕ್ರಮ ಸಂಚಾಲಕರು ಹಾಗೂ ಪ್ರತಿμÁ್ಠಪನೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.