ಸದ್ದಿಲ್ಲದೆ ನಡೆದ ಮಾಸಿಕ ಶಿವಾನುಭವ ಗೋಷ್ಠಿ

ವಿಜಯಪುರ.ಫೆ೨೯:ಸುದ್ದಿಗಾಗಿ ಸೇವೆ ಮಾಡಬೇಡಿ ಸೇವೆ ಮಾಡಿ ಸುದ್ದಿಯಾಗಬೇಡಿ ಸದ್ದಿಲ್ಲದೆ ಸೇವೆ ಮಾಡಿ. ನಮ್ಮ ನಾಡಿನಲ್ಲಿ ಹಲವಾರು ಶರಣರು ಸಂತರು ದಾಸರು ಆಗಿ ಹೋಗಿದ್ದಾರೆ ಅವರ ಸಾಲಿಗೆ ಶಿವಕುಮಾರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮೀಜಿಗಳು ಸೇರುತ್ತಾರೆ.ಅವರ ಜೀವನಾದರ್ಶ ಎಲ್ಲರ ಬಾಳಿನಲ್ಲಿ ದಾರಿ ದೀಪ ಎಂಬುದಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ ಎಂ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಜಯಪುರದ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ೩೪೮ ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ದಲ್ಲಿ ಕೆ ಸಿ ಶಿವಪ್ಪ ನವರ ಮುದ್ದು ರಾಮನ ಚೌಪದಿಗಳು ಕೃತಿಯ ಕುರಿತು ಉಪನ್ಯಾಸ ನೀಡುತ್ತಾ ಷಟ್ಪದಿ ಎಂದರೆ ಆರು ಸಾಲಿನ ಹಾಗೂ ಚೌಪದಿಗಳು ಎಂದರೆ ನಾಲ್ಕು ಸಾಲಿನ ಪದ್ಯ ಪ್ರಾಕಾರ. ಶಿವಪ್ಪ ನವರು ಚೌಪದಿ ಮುಖಾಂತರ ಎಲ್ಲರ ಮನ ಮುಟ್ಟುವಂತೆ ಸರಳ ಕನ್ನಡದಲ್ಲಿ ಸರ್ವರೂ ಬದುಕಿನಲ್ಲಿ ಅಳವಡಿಸಿಕೊಳ್ಳಲು ಬೇಕಾದ ಸನ್ಮಾರ್ಗವನ್ನು ತೋರಿದ್ದಾರೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಬದುಕಿಗೆ ಆಧ್ಯಾತ್ಮವನ್ನು ಡಿ ವಿ ಜಿ ಅವರು ಮಂಕುತಿಮ್ಮನಕಗ್ಗ ಕೃತಿಯ ಮುಖಾಂತರ ಹಳಗನ್ನಡ ದಲ್ಲಿ ಭೋಧಿಸಿದ್ದಾರೆ ಅದು ಆಧುನಿಕ ಭಗವದ್ಗೀತೆ ಆದರೆ ಕೆ ಸಿ ಶಿವಪ್ಪ ನವರ ಚೌಪದಿಗಳು ಆಧುನಿಕ ವಚನಗಳು. ಜನ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಬಾಳಿಗೆ ಬೇಕಾದ ಹಲವಾರು ಮೌಲ್ಯ ಗಳನ್ನು ಸರಳವಾಗಿ ತಿಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ನಂತರ ಬಳಗದ ಉಪಾಧ್ಯಕ್ಷೆ ಅಂಭಾಭವಾನಿ ಅಕ್ಕ ಮಾತನಾಡುತ್ತ ನಮ್ಮ ಅಕ್ಕನ ಬಳಗದ ಸಂಸ್ಥಾಪಕ ಅಧ್ಯಕ್ಷ ಲಿಂಗೈಕ್ಯ ದೊಡ್ಡ ಅಪ್ಪಯ್ಯಣ್ಣ ನಂಜಮ್ಮ ದಂಪತಿಗಳ ಬದುಕು ಎಲ್ಲರಿಗೂ ಆದರ್ಶ ಗುರು ಲಿಂಗ ಜಂಗಮ ಪ್ರೇಮಿಗಳೂ,ಸರ್ವ ಭೂತದಯಾಪರರೂ, ಆಗಿದ್ದು ಹಲವಾರು ದಾನ ಧರ್ಮಗಳನ್ನು ಮಾಡಿ ಅಮರರಾಗಿದ್ದಾರೆ . ಶ್ರೀಯುತರ ಸಾರ್ಥಕ ಬದುಕಿನ ರೀತಿ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿ ಬಸಪ್ಪ ಮಾತನಾಡುತ್ತಾ ತಾವು ವಾಸಿಸುತ್ತಿದ್ದ ವಾಸದ ಮನೆಯನ್ನೇ ದಾನವಾಗಿ ಬಿಟ್ಟುಕೊಟ್ಟ ಹೆಗ್ಗಳಿಕೆ ಕೀರ್ತಿಶೇಷ ಪುಟ್ಟಣ್ಣಯ್ಯ ದಂಪತಿಗಳಿಗೆ ಸೇರುತ್ತದೆ. ಅವರ ನಿಸ್ವಾರ್ಥ ಬದುಕು ಎಲ್ಲರಿಗೂ ಆದರ್ಶ ಎಂದು ತಿಳಿಸಿದರು. ಬಳಗದ ಸಂಚಾಲಕ ಕವಿ ಮ ಸುರೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಭಾರತಿ ಜಗದೀಶ್ ಪ್ರಾರ್ಥನೆ, ಶ್ರೀಮತಿ ರಾಧ ಮನೋಹರ್ ಸ್ವಾಗತಿಸಿದರು.ಶ್ರೀಮತಿ ವಿಮಲಾಂಬ ಅನಿಲ್, ಶ್ರೀಮತಿ ಮಹಾದೇವಮ್ಮ ಸಂಗಡಿಗರು ವಚನಗಳನ್ನು ಹಾಡಿದರು .ನಿಯೋಜಿತ ಅಧ್ಯಕ್ಷ ಶ್ರೀ ಅನಿಲ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು . ಕಾರ್ಯಕ್ರಮದಲ್ಲಿ ನಿವೃತ್ತ ರೇಷ್ಮೆ ನೌಕರ ಕೃಷ್ಣಾನಂದ,ಕೆ ಇ ಬಿ ನಿವೃತ್ತ ಅಧಿಕಾರಿ ಬಿ ಪುಟ್ಟ ರಾಜಣ್ಣ, ಹಿರಿಯ ಸಾಹಿತಿ ಬೆ ಕಾ ಮೂರ್ತಿಶ್ವರಯ್ಯ ,ಶ್ರೀ ಕೃಷ್ಣಪ್ಪ ದಾಸರು,ಶರಣ ಮ ಜಯದೇವ್ ಇನ್ನೂ ಹಲವಾರು ಗಣ್ಯರು ಭಾಗವಹಿಸಿದ್ದರು