ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ಬರ್ಬರಿಕೆ

ಮಹಾಭಾರತದಲ್ಲಿ ಬರುವ ’ಬರ್ಬರಿಕ’ ಭೀಮನ ಮೊಮ್ಮಗನೆಂದು ಹೇಳಲಾಗಿದೆ. ಈತನಿಗೆ ಸೋಲೆಂಬುದು ಇಲ್ಲ.ಯುದ್ದ ಗೆಲ್ಲುವ ಶಕ್ತಿ ಇರುತ್ತದೆ.  ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಿ  ಕುಂಬಳಕಾಯಿ ಒಡೆದಿದೆ.  ಬೆಂಗಳೂರಿನ ಪಿ.ಜನಾರ್ಧನ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಶಾಂಡಿಲ್ಯ ನಿರ್ದೇಶನ ಮಾಡಿದ್ದಾರೆ.

ಆಸ್ಪತ್ರೆ ಮತ್ತು ಶಿಕ್ಷಣ ವ್ಯವಸ್ಥೆಯ ಅಂಶಗಳನ್ನು ಕಥೆಯಲ್ಲಿ ತೆಗೆದುಕೊಳ್ಳಲಾಗಿದೆ.  ದುಡ್ಡಿನ ಸಮಸ್ಯೆ ಇರುವ ಕಾರಣ ಅನಿವಾರ್ಯವಾಗಿ ಗುತ್ತಿಗೆ ಕೊಲೆಗಾರನಾಗಿ, ಮುಂದೆ ಸುಪಾರಿ ಕಿಲ್ಲರ್ ಆಗಿ, ಒಂದು ಹಂತದಲ್ಲಿ ತಿರುವು ಪಡೆದುಕೊಂಡಾಗ, ಗುಣದಲ್ಲಿ ಬದಲಾವಣೆಯಾಗುವ ಪಾತ್ರದಲ್ಲಿ ಸ್ಕಂದಅಶೋಕ್ ನಾಯಕ.

ಮಧ್ಯಮ ವರ್ಗದ ಹುಡುಗಿಯಾಗಿ ಡಿಗ್ಲಾಮರ್ ಆಗಿ ಕಾಣಿಸಿಕೊಂಡಿರುವ ಸಿರಿರಾಜು ನಾಯಕಿ. ಕೆಟ್ಟ ವ್ಯಕ್ತಿಗಳೊಂದಿಗೆ ಪ್ರತಿಭಟಿಸುವ ’ಜೊತೆ ಜೊತೆಯಲಿ’ ಝೇಂಡೇ ಖ್ಯಾತೊಯ ಬಿ.ಎಂ.ವೆಂಕಟೇಶ್ ಸಮಾಜ ಸೇವಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಬಲರಾಜವಾಡಿ, ಯುಮುನಾಶ್ರೀನಿಧಿ, ಚಿರಾಗ್, ಮಡಿವಾಳಯ್ಯ, ಕಾವ್ಯಪ್ರಕಾಶ್, ಶೈಲೇಶ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಯಕ ಹಾಗೂ ಬರ್ಬರಿಕನಿಗೂ ಲಿಂಕ್ ಇರುತ್ತದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ.

ಮೂರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕೆ.ವಿ.ಇಂದ್ರಜಿತ್, ಸಂಕಲನ ಉದಯ್.ಪಿ.ಆರ್, ಸಾಹಸ ನರಸಿಂಹ, ನಿರ್ಮಾಣ ನಿರ್ವಹಣೆ ರಾಮಚಂದ್ರ ಅವರದಾಗಿದೆ.