ಸದ್ಗುರು ಸಿದ್ದಾರೂಢರ ಮಠದ ಜಾತ್ರಾ ಮಹೋತ್ಸವ

ಕೆಂಭಾವಿ:ಎ.2:ಪಟ್ಟಣ ಸಮೀಪದ ನಡಕೂರ ಗ್ರಾಮದ ಸದ್ಗುರು ಸಿದ್ದಾರೂಢರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪ.ಪೂ ಸಂಗಮೇಶ್ವರರ 41 ನೇ ಪುಣ್ಯಾರಾಧನೆ, ಸಿದ್ಧಾರೂಢರ ಪಲ್ಲಕ್ಕಿ ಉತ್ಸವ, ತತ್ವಾಮೃತಧಾರೆ ಹಾಗೂ ಸಾಮೂಹಿಕ ವಿವಾಹ ಜರುಗಲಿವೆ.
ಎಪ್ರಿಲ್ 2 ರವಿವಾರ ಸಿದ್ಧಾರೂಢರ ಪಲ್ಲಕ್ಕಿ ಉತ್ಸವವು ಕುಂಭ, ಆರತಿ ಡೊಳ್ಳು ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಗಳ ಮೂಲಕ ಮೆರವಣಿಗೆ ನಡೆಯಲಿದೆ. ಎಪ್ರಿಲ್ 5 ರವರೆಗೆ ಸಿದ್ದಾರೂಢ ಮಠದ ಪೀಠಾಧಿಪತಿಗಳಾದ ಪ.ಪೂ ಪ್ರಣಾವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಮಠದ ಆವರಣದಲ್ಲಿ ಬೆಳಿಗ್ಗೆ 8 ರಿಂದ 11 ಮತ್ತು ಸಾಯಂಕಾಲ ಸಂಜೆ 8 ರಿಂದ 10 ರವರೆಗೆ ವಿವಿಧ ವಿಷಯಾಧಾರಿತ ಪ್ರವಚನ ಜರುಗಲಿದ್ದು, ಬೋರಗಿಪುರದಾಳದ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಪ್ರಣವ ದ್ವಜಾರೋಣ ನೆರವೇರಿಸುವರು. ಗಂವ್ಹಾರ ಮಠದ ಸೋಪಾನನಾಥ ಮಹಾಸ್ವಾಮಿಗಳು, ಯಳಸಂಗಿ ಮಠದ ಪರಮಾನಂದ ಮಹಾಸ್ವಾಮಿಗಳು, ಹುಲ್ಯಾಳದ ಶರಣೆ ಜಯಶ್ರೀ ದೇವಿ, ಕರಡಕಲ್ ಕೋರಿಸಿದ್ದೇಶ್ವರ ಮಠದ ಶಾಂತರುದ್ರಮುನಿ ಮಹಾಸ್ವಾಮಿಗಳು, ಅಗತೀರ್ಥದ ರೇವಣಸಿದ್ದೇಶ್ವರ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಬಂಡೆಪ್ಶನಹಳ್ಳಿಯ ಸಣಕ್ಕೆಪ್ಪ ಮುತ್ಯಾ, ಮೈಂದರಗಿಯ ಅಭಿನವ ರೇವಣಸಿದ್ದ ಪಟ್ಟದೇವರು, ಕಲ್ಲಹಂಗರಾಗಾದ ಗೋಪಾಲ ಶಾಸ್ತ್ರಿಗಳು ಸೇರಿದಂತೆ ವಿವಿದ ಪೂಜ್ಯರಿಂದ ತತ್ವಾಮೃತಧಾರೆ, ಎ. 6 ಗುರುವಾರ ಸಾಮೂಹಿಕ ವಿವಾಹ ನಡೆಯಲಿವೆ ಎಂದು ಮಠದ ಉಸ್ತುವಾರಿ ಸಮಿತಿ ತಿಳಿಸಿದೆ.