
ಚಿಂಚೋಳಿ,ಮಾ.2: ಪಟ್ಟಣದಲ್ಲಿ ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಹಾರಕೂಡ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವದ ಸದ್ಗುರು ಶ್ರೀ ಚನ್ನಬಸವ ಶಿವಯೋಗಿಗಳ ಅದ್ದೂರಿ ರಥೋತ್ಸವ ಜರುಗಿತು.
ನಂತರ ಸಾಯಂಕಾಲ 7:00 ಗಂಟೆಗೆ ಶಿವಾನುಭವ ಚಿಂತನ ಕಾರ್ಯಕ್ರಮ ಜರಗಿತು ಕಾರ್ಯಕ್ರಮವನ್ನು ಮಾದನಹಿಪ್ಪರಗಾ,ಶಿವಲಿಂಗೇಶ್ವರ ವಿರಕ್ತ ಮಠ, ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಜ್ಯೋತಿ ಬಳಸು ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಚಿಂಚೋಳಿ ಶಾಸಕರಾದ ಡಾ. ಅವಿನಾಶ ಜಾಧವ, ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ, ಸೇಡಂ ಶಾಸಕರು ಮತ್ತು ಈ.ಕ.ರ.ಸಾ.ಸಂಸ್ಥೆ ಹಾಗೂ ಡಿ.ಸಿ.ಸಿ.ಬ್ಯಾಂಕ್, ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೆಲ್ಲೂರ, mಚಿiಟ ಮಾಜಿ ಅಧ್ಯಕ್ಷರಾದ ಡಾ. ವಿಕ್ರಮ್ ಪಾಟೀಲ, ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಆರ್. ಯಾಕಾಪೂರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ್ ಪಾಟಿಲ್, ಪುರಸಭೆ ಅಧ್ಯಕ್ಷರಾದ ಜಗದೇವಿ ಎಸ್. ಗಡಂತಿ, ಜಾತ್ರಾ ಮಹೋತ್ಸವದ ವ್ಯವಸ್ಥಾಪಕರಾದ ಕಲ್ಲಪ್ಪ ಹೊಗತಾಪುರೆ, ಶಶಿಧರ್ ಯಾಲಾಲ್, ಶಂಕರಗೌಡ ಅಲ್ಲಾಪೂರ್, ನಾಗರಾಜ ಕಲಬುರ್ಗಿ, ಸುಭಾಷಚಂದ್ರ ಸೀಳಿನ್, ವಿರೂಪಾಕ್ಷಪ್ಪ ಯ0ಪಳ್ಳಿ, ರಾಜು ಮಜ್ಜಿಗಿ, ಸಂತೋಷ್ ಗಡಂತಿ, ಮಲ್ಲಿಕಾರ್ಜುನ್ ಪಲಮೂರ್, ಅಜೀತ ಪಾಟೀಲ್, ನಾಗರಾಜ ಮಲಕೂಡ್, ವಿಷ್ಣುಕಾಂತ ಮೂಲಗಿ, ರಾಹುಲ ಯಾಕಾಪೂರ, ಕೆಎಂ ಬಾರಿ, ಶ್ರೀಮಂತ ಕಟ್ಟಿಮನಿ, ಆರ್ ಗಣಪತರಾವ್, ಶಾಂತವೀರ್ ಹಿರಾಪೂರ್, ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಶ್ರೀ ಮಠದ ಅಪಾರಭಕ್ತರು ಉಪಸ್ಥಿತರಿದ್ದರು.