
ಸೈದಾಪುರ: ಆ.23:ಒತ್ತಡದ ಜೀವನಕ್ಕೆ ಸಿಲುಕಿದ ಮನುಷ್ಯ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಒತ್ತಡ ನಿವಾರಣೆಯಾಗಿ ಮಾನಸಿಕ ಶಾಂತಿ ಪಡೆಯಲು ಸದ್ಗುರಿವಿನ ಉಪದೇಶವನ್ನು ನಾವೆಲ್ಲರೂ ಆಲಿಸಬೇಕಾಗಿದೆ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಶ್ರೀ ಆಶೀರ್ವಚನ ನೀಡಿದರು.
ಪಟ್ಟಣದ ಸಿದ್ದಚೇತನಾಶ್ರಮ ಸಿದ್ದಾರೂಢಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ 16ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರಿಗೆ ಭಕ್ತಿ ಸಂದೇಶ ನೀಡಿದರು. ಗುರುವಿನ ಉಪದೇಶವನ್ನು ಆಲಿಸುವ ಜತೆಗೆ ಅದನ್ನು ಪಾಲಿಸಬೇಕು ಅಂದಾಗ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ಅಹಂಕಾರ ವಿನಾಶಕ್ಕೆ ದಾರಿ ಇದ್ದಂತೆ. ಅಹಂ ಸ್ವಭಾವದಿಂದ ಮನುಷ್ಯ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆದರೆ ಶಾಂತಿಯಿಂದ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ ಎಂಬುದನ್ನು ಹಲವು ಉದಾರಣೆಗಳ ಮೂಲಕ ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಪ್ರವಚನ ನಂತರ ಭಕ್ತರಿಗಾಗಿ ಶ್ರೀ ಮಠರದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.