ಸದ್ಗುರುಜಿಗೆ ಗೌರವ ಅಭಿನಂದನಾ ಸಮಾರಂಭ

ಕಲಬುರಗಿ,ಆ.3-ಅಮೇರಿಕ ದೇಶದ ಏಶಿಯಾ ವೇದಿಕ್ ಕಲ್ಚರಲ್ ವಿಶ್ವ ವಿದ್ಯಾಲಯದಿಂದ ಪೂಜ್ಯ ಶ್ರೀ ಮಂತ್ರ ಮಹರ್ಷಿ ಡಾ.ಎನ್.ಬಿ.ರೆಡ್ಡಿ ಸದ್ಗುರುಜಿ ಅವರು ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ಕನ್ನಡ ಟಿವಿ ಮಿಡಿಯಾ ಪ್ರಾವೆಟ್ ಲಿಮಿಟೆಡ್ ವತಿಯಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಕಮಲಾಪೂರ ತಾಲ್ಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ದೀಪಕ ಸಲಗರ ಅವರ ಅಧ್ಯಕ್ಷತೆಯಲ್ಲಿ ಪೂಜ್ಯಶ್ರೀ ಮಂತ್ರ ಮಹರ್ಷಿ ಡಾ.ಎನ್.ಬಿ.ರೆಡ್ಡಿ ಸದ್ಗುರುಜಿ ರವರಿಗೆ ಅಭಿನಂದನಾ ಸಮಾರಂಭವನ್ನು
ಹಿರಿಯ ಚಲನಚಿತ್ರ ನಟ ವೈಜಿನಾಥ ಬಿರಾದಾರ ಅವರು ಉದ್ಘಾಟಿಸಿ ಮಾತನಾಡುತ್ತ ಮನುಷ್ಯನ ಜೀವನಕ್ಕೆ ಸದ್ಗುರುವಿನ ಆಶೀರ್ವಾದ ಬೇಕೇ ಬೇಕು ಅಂದಾಗ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಅವರು ಹೇಳಿದರು. ಜೀವನದಲ್ಲಿ ಗುರುವೆಂಬ ಪದ ಬಹಳ ಅರ್ಥಗರ್ಭಿತವಾದದ್ದು. ಹಿಂದೆ ಗುರು ಮುಂದೆ ಗುರಿ ಅಂದಾಗ ಜೀವನದಲ್ಲಿ ಸ್ವಾರ್ಥಕತೆ ಕಾಣಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಾಹಿತಿ ಗೋವಿಂದ ರಾಜು, ಉದ್ಯಮಿ ಜಯರಾಜ, ಬಸವರಾಜ ಆರ್. ಆರ್ಯ ಹುಮನಾಬಾದ, ನಿವೃತ್ತ ಶಿಕ್ಷಕ ದಾನಪ್ಪ ಸಲಗರ ಸಂತೋಷ ಖೇಡ್ ಮತ್ತು ಶಂಭುಲಿಂಗ ಗೊಳೆ ಉಪಸ್ಥಿತರಿದ್ದರು, ಧಮೇರ್ಂದ್ರ ಪೂಜಾರಿ ಸ್ವಾಗತಿಸಿದರು. ಖ್ಯಾತ ನಿರೂಪಕ ಎಸ್.ಎಮ್.ಭಕ್ತ ಕುಂಬಾರ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.