ಸದ್ಗುಣಗಳೇ ವಿದ್ಯಾರ್ಥಿಗಳಿಗೆ ಭೂಷಣ: ಮೋಹನರೆಡ್ಡಿ

ಭಾಲ್ಕಿ:ಆ.19:ಸದ್ಗುಣ, ಸತ್ಕಾರ್ಯಗಳು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಆಡಳಿತಾಧಿಕಾರಿ ಮೋಹನರೆಡ್ಡಿ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡಿದ್ದ ಜೀವನ ಮೌಲ್ಯಗಳು ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನಸ್ಸು ಪ್ರಫುಲ್ಲವಾಗಿರಲು, ಶರೀರ ಸದೃಢವಾಗಿರಲು ಎಲ್ಲರೂ ಧಾರ್ಮಿಕ ಪ್ರವಚನ ಕೇಳುವುದು ನಿತ್ಯ ಧ್ಯಾನ, ಯೋಗ ಮಾಡುವುದು ಅತ್ಯಂತ ಜರೂರಿ ಆಗಿದೆ. ಬಾಲ್ಯದ ಗುಣಗಳು ಜೀವನದ ಕೊನೆವರೆಗೂ ಇರುವುದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಒಂದು ತಿಂಗಳ ಪಯರ್ಂತ ನಡೆಯುವ ಪ್ರವಚನದ ಲಾಭವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ವಸತಿ ವಿಭಾಗದ ಮುಖ್ಯಸ್ಥೆ ಜಯಕ್ಕಾ ಗಾಂವ್ಕರ್, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ಲಕ್ಷ್ಮಣ ಮೇತ್ರೆ ಇದ್ದರು.