
ಕಲಬುರಗಿ,ಸೆ.06: ನಮ್ಮ ಜೀವನ ಇಂದು ಒತ್ತಡದಿಂದ ಸಾಗುತ್ತಿದ್ದು ಸದ್ಗತಿ ಬದುಕು ಕಟ್ಟಿ ಕೊಳ್ಳಲು ನಮಗೆ ಆಧ್ಯಾತ್ಮಿಕ ಮಾರ್ಗ ಅವಶ್ಯವಾಗಿದೆ ಎಂದು ಸಮಗ್ರ ಕರ್ನಾಟಕ ಉಪಾಧ್ಯಯರ ಪ್ರಗತಿಪರ ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಅಭಿಪ್ರಾಯ ಪಟ್ಟರು.
ನಗರದ ಮಹಾದೆವಪ್ಪ ರಾಂಪೂರೆ ಕೂಡಾ ಬಡಾವಣೆಯ ಯುವ ಕುಟೀರದಲ್ಲಿ ಏರ್ಪಡಡಿಸಿದ ಶ್ರಾವಣ ಮಾಸದ ದ್ವಿತೀಯ ವರ್ಷದ ‘ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಪುರರುಷರ ಆದರ್ಶಗಳನ್ನು ಜೀವನದಲ್ಲಿ ಅವಡಿಸಿಕೊಂಡು ಹಸನಾದ ಬದುಕು ನಡೆಯಬೇಕು ಎಂದರು.
ಸಾಹಿತಿ ಧರ್ಮಣ್ಣ ಧನ್ನಿ ಅವರು ಉಪನ್ಯಾಸ ಮಂಡಿಸಿ, ಶರಣರು ದಾಸರ ಚಿಂತನೆಗಳನ್ನು ಮಂಥನ ಮಾಡಿಕೊಂಡು ನಡೆದಾಗ ಮಾತ್ರ ಜೀವನ ಪಾವನವಾಗಲು ಸಾಧ್ಯ. ಜೊತೆಗೆ ನಮ್ಮ ನಡೆ ನುಡಿ ಒಂದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸ್ಕೂಪ್ಸ್ ಜಿಲ್ಲಾ ಘಟಕದ ಅಧ್ಯಕ್ಷೆ ಸಾವಿತ್ರಿ ಪಾಟೀಲ ಅವರು, ಸಮಾಜದಲ್ಲಿ ಅಧ್ಯಾತ್ಮಕ ಚಿಂತನೆಗಳು ಜಾಗೃತಿ ಮೂಡಿಸಬೇಕಾಗಿದೆ. ಇಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕಾಗಿದೆ ಎಂದರು.
ಸ್ಕೂಪ್ಸ್ ಕೋಶಾಧ್ಯಕ್ಷ ವೆಂಕಟರೆಡ್ಡಿ ಕರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಹ ಕಾರ್ಯದರ್ಶಿ ಶರಣಮ್ಮ ಜಮಾದಾರ, ನಿವೃತ್ತ ಅಂಚೆ ಅಧಿಕಾರಿ ಮಲ್ಲೇಶಪ್ಪ ಗುಡೂರ, ಗುರುರಾಜ ಅಗ್ನಿಹೋತ್ರಿ, ನಿವೃತ್ತ ಮುಖ್ಯಗುರು ನಾಗರಾಜ ಮಾಡ್ಯಾಳ, ನಾಗೇಂದ್ರಪ್ಪ ಮುಚ್ಚಟ್ಟಿ, ಸ್ವರಾಜಲಕ್ಮಿ ರೆಡ್ಡಿ, ನಿವೃತ್ತ ಸೈನಿಕ ನಾಗಣ್ಣ, ಮುರಳೀಧರ, ಸುಮಂಗಲಾ ಕುಲಕರ್ಣಿ, ಈಶ್ವರ ಗುಡೇದ, ಡಾ. ಅಣ್ಣಾರಾವ ಪಾಟೀಲ ಭಾಗವಹಿಸಿದರು. ಡಾ. ನಾಗರಾಜ ಬಡಿಗೆರ್ ನಿರೂಪಿಸಿದರು. ಬಾಬುರಾವ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಅಗ್ನಿಹೋತ್ರಿ ಪ್ರಾರ್ಥನೆ ಗೀತೆ ಡಿದರು. ನಂತರ ಬಡಾವಣೆಯ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.