ಸದೃಢ ಸಮಾಜಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ : ವಿಜಯಲಕ್ಷ್ಮಿ

ಔರಾದ : ಸೆ.22:ಪೌಷ್ಟಿಕತೆ ಎಂದರೆ ಮಾನವನ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಿರುವ ಆಹಾರವನ್ನು ಒದಗಿಸುವ ಮತ್ತು ಪಡೆಯುವ ಪ್ರಕ್ರಿಯೆ. ಜೀವನದುದ್ದಕ್ಕೂ ನಾವು ವಿವಿಧ ಆಹಾರಗಳು, ಪಾನೀಯಗಳು ಮತ್ತು ತಿನಿಸುಗಳನ್ನು ಸೇವಿಸುತ್ತೇವೆ. ಪೌಷ್ಟಿಕ ಆಹಾರ ಸೇವನೆಯಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಮೇಲ್ವಿಚಾರಕಿ ವಿಜಯಲಕ್ಷ್ಮೀ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಬುಧವಾರ ಸಂತಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಪೆÇೀಷಣ ಮಾಹೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೆÇೀಷಣೆ ಯೋಜನೆಯಲ್ಲಿ ಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆಯ, ರಕ್ತ ಹೀನತೆ , ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರು, ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಮಕ್ಕಳ ಕಲ್ಯಾಣ ಇಲಾಖೆ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ಗೊಳಿಸಿದೆ. ಪ್ರತಿಯೊಬ್ಬರು ಈ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಪಡಿಸಿಕೊಂಡು ಹಂತ ಹಂತವಾಗಿ ಅಪೌಷ್ಟಿಕತೆ ಮುಕ್ತ ಕರ್ನಾಟಕ ಹಾಗೂ ಅಪೌಷ್ಟಿಕತೆ ಮುಕ್ತ ರಾಷ್ಟ್ರಕ್ಕಾಗಿ ಕೈಜೋಡಿಸಬೇಕು ಎಂದರು .

ಸಂತಪುರ್ ಗ್ರಾಮ ಪಂಚಾಯತ್ ಅಧ್ಯಕ್ಷೆ
ಮಹಾದೇವಿ ಅವರು ಜ್ಯೋತಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಮಾಹಾದೇವಿ ಅವರು ಮಾತನಾಡಿ ಸದೃಢ ಸಮಾಜಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು .ಮಹಿಳೆಯರು ಉತ್ತಮ ವಿಟಮಿನ್ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣಿಕರ್ತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಚೊಚ್ಚಲ ಗರ್ಭಿಣಿಯರಿಗೆ ಉಡಿ ತುಂಬುವ ಹಾಗೂ ಆರು ತಿಂಗಳ ನಂತರ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಇಸ್ಮಾಯಿಲ, ಗ್ರಾ.ಪಂ ಸದಸ್ಯ ಸಂತೋಷ, ಮುಖ್ಯೋಪಾಧ್ಯಾಯರು ಶಿವಪುತ್ರ, ಸಹಶಿಕ್ಷ ನೌನಾಥ, ಅಂಗನವಾಡಿ ಕಾರ್ಯಕರ್ತರೆಯರು ಸಿ.ಐ.ಟಿ.ಯು ಸಂಘಟನೆಯ ಅಧ್ಯಕ್ಷೆ ಪದ್ಮಾವತಿ, ಸೇರಿದಂತೆ ಎಲ್ಲ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.