ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ: ವಿಜಯಕುಮಾರ ಜಮಖಂಡಿ

ಕಲಬುರಗಿ,ಫೆ.24-ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದು ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಹೇಳಿದರು.
ನಗರದ ಕೆಪಿಇ ಸಂಸ್ಥೆಯ ಪ್ರಜ್ಞಾ ಆಂಗ್ಲ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಶಿಕ್ಷಣ ಎನ್ನುವುದು ಹುಲಿಯ ಹಾಲಿನಂತೆ ಹಾಲು ಎಂಬ ಶಿಕ್ಷಣ ಕುಡಿದು ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಅಧ್ಯಯನ ಮಾಡಬೇಕು ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದ ಹಣೆಪಟ್ಟಿಯನ್ನು ಹೋಗಲಾಡಿಸಿ ಕರ್ನಾಟಕದಲ್ಲಿಯೇ ಕಲಬುರಗಿ ಜಿಲ್ಲೆಯು ಮುಂದುವರಿದ ಜಿಲ್ಲೆಯನ್ನಾಗಿ ಪರಿವರ್ತಿಸಬೇಕಾದರೆ ಶಿಕ್ಷಣ ಎನ್ನುವ ಸೂತ್ರದ ಮೂಲಕವೇ ಸಾಧ್ಯ ಅದಕ್ಕಾಗಿ ಪ್ರಜ್ಞಾ ಶಾಲೆಯ ಎಲ್ಲ ಮಕ್ಕಳು ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡಿ ನಿಮ್ಮ ಶಾಲೆಯ ಗುರುಗಳಿಗೂ ಮತ್ತು ನಿಮ್ಮ ತಂದೆ ತಾಯಿಗಳಿಗೂ ಕೀರ್ತಿ ತರಬೇಕು ಎಂದು ಹೇಳಿದರು.
ಸಮಾರಂಭದ ಅತಿಥಿಗಳಾದ ಬಿ .ಜಿ ಚೌಹಾಣ್ ಅವರು ಮಾತನಾಡುತ್ತ, ಇಂದಿನ ಮಕ್ಕಳು ನಾಳೆಯ ನಾಗರಿಕರು ಈ ದೇಶವನ್ನು ಸದೃಢ ರಾಷ್ಟ್ರವನ್ನಾಗಿ ಕಟ್ಟಬೇಕಾಗಿದ್ದರೆ ವಿದ್ಯಾರ್ಥಿಗಳು ಸಂಕಲ್ಪ ತೊಡಬೇಕು ನನ್ನ ದೇಶ ನನ್ನ ಗುರಿ ಎನ್ನುವ ಮಂತ್ರವನ್ನು ಪಠಿಸುತ್ತಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸುರನ್ ಅವರು ಮಾತನಾಡುತ್ತ ನಮ್ಮ ಪ್ರಜ್ಞಾ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಓದಿರುವ ಅನೇಕ ಮಕ್ಕಳು ಇಂದು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರಂತೆ ನೀವು ಒಳ್ಳೆಯ ಅಧ್ಯಯನ ಮಾಡಿ ಜ್ಞಾನವಂತರಾಗಬೇಕು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರದಂತೆ ಶಿಕ್ಷಣವೇ ನಮ್ಮ ಆಸ್ತಿ ಎನ್ನುವ ರೀತಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ-ಅಧ್ಯಾಪನದಲ್ಲಿ ತೊಡಗಿಸಿಕೊಂಡು ಒಳ್ಳೆಯ ನಾಗರೀಕರಾಗಿ ಹೊರಹೊಮ್ಮಿ ಸದೃಢ ಸಮಾಜವನ್ನು ಕಟ್ಟುವ ಸಂಕಲ್ಪವನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕೆಪಿಇ ಸಂಸ್ಥೆಯ ಆಡಳಿತಾಧಿಕಾರಿ ಡಾ.ಚಂದ್ರಶೇಖರ ಶೀಲವಂತ ಶಾಲೆಯ ಮುಖ್ಯ ಗುರುಗಳಾದ ಮಂಜುಳಾ ಮಾತನಾಡಿದರು. ಶಾಲೆಯ ಸಿಬ್ಬಂದಿಗಳಾದ ಕುಮಾರಿ ಶಿಲ್ಪಾ ಸಿಂಗ್, ಬಸವರಾಜ್ ಗುಂಜಾಳ, ರಾಜಕುಮಾರ್, ಸೋಮಶೇಖರ್ ಉಪಸ್ಥಿತರಿದ್ದರು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಶಾಲೆಯ ಕಿರ್ತಿ ಹೆಚ್ಚಿಸಿದೆ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸೋಮಶೇಖರ್ ಅವರು ಸ್ವಾಗತಿಸಿದ್ದರು. ಅಂಜಲಿ ಜಾದವ್ ನಿರೂಪಿಸಿ ವಂದಿಸಿದರು.