ಸದೃಢ ಭಾರತ :ಯುವಕರ ಪಾತ್ರ ಪ್ರಮುಖ

ಸಿರವಾರ ಡಿ.೨೭- ಭಾರತ ವಿಶ್ವಗುರುವಾಗುವಲ್ಲಿ ಮತ್ತು ಸಶಕ್ತ ಭಾರತ ನಿರ್ಮಾಣವಾಗುವಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು ಎಂದು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಯುವಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ವಿವೇಕಮಾಲೆ ಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವಗುರು ಮಾಡುವ ಕನಸನ್ನು ಕಂಡಿದ್ದರು, ಅವರ ಕನಸ್ಸನ್ನು ಇಂದಿನ ಯುವಪೀಳಿಗೆ ಸಾಕಾರಗೊಳಿಸಬೇಕಿದೆ. ಒಳ್ಳೆಯ ಸಮಾಜವನ್ನು ಕಟ್ಟುವುದರಿಂದ ದೇಶದ ಪ್ರಗತಿ ಸಾಧ್ಯ. ಯುವಕರು ಮಾಲಾಧಾರಣೆ ಮಾಡಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಂತರ ಕಾರ್ಯಕ್ರಮವನ್ನು ಉದ್ದೇಶೀಸಿ ವೈದ್ಯಾಧಿಕಾರಿ ಡಾ.ನಾಗೇಶ ಶ್ಯಾವಿ, ನರಸಿಂಹರಾವ್ ಕುಲಕರ್ಣಿ ಮಾತನಾಡಿದರು.
ಈ ಸಂಧರ್ಭದಲ್ಲಿ ಡಾ.ಸುನೀಲ್ ಸರೋದೆ, ಸಿದ್ರಾಮೇಶ್ವರ ಪತ್ತಾರ, ತಿರುಮಲರಾವ್ ಕುಲಕರ್ಣಿ, ಶ್ರೀನಿವಾಸ ಬಸ್ಸಾಪೂರ, ಪಿ.ಕೃಷ್ಣ, ಸಂತೋಷ, ತೊಗಲೂರು, ಬಸಲಿಂಗಯ್ಯ ಸ್ವಾಮಿ, ಅಭಿಷೇಕ, ಪಾಟೀಲ್, ಭೀಮಣ್ಣ ಬಂಗಾರ, ಅರುಣ ಪತ್ತಾರ, ಸುಹಾಸ್, ಮಲ್ಲು, ವಿಶ್ವನಾಥ ಇತರರು ಇದ್ದರು.