ಸದೃಢ ಭಾರತಕ್ಕಾಗಿ, ಸದೃಢ ದೇಹ; ಶಿಕ್ಷಕ ರಘುನಾಥ ಮಸರಬೋ

ಫರತಾಬಾದ;ನ.25: ಸಮೀಪದ ಹೋನ್ನ ಕಿರಣಗಿಯ ಶ್ರೀ ಶಿವಯೋಗಪ್ಪ ವಗ್ರ್ದಗಿ ಪ್ರೌಢಶಾಲೆಯಲ್ಲಿ ನಡೆದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ರಘುನಾಥ ಮಸರಬೋ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯಸ್ಥರಾಗಿ ಶಾಲೆಯಲ್ಲಿ ನಡೆಸುವ ಫಿಟ್ ಇಂಡಿಯಾ
ಸಪ್ತಾಹದ 6 ದಿನಗಳಲ್ಲಿ ಮೊದಲನೆ ದಿನ ಪ್ರಾದೇಶಿಕ ನೃತ್ಯದ ಮೂಲಕ ಫಿಟ್ನೆಸ್, ಎರಡನೆ ದಿನ ಫಿಟ್ನೆಸ್ ಕುರಿತಾಗಿ ಪ್ರಬಂಧ, ಕ್ರೀಡೆ, ಉಪನ್ಯಾಸ ಆಯೋಜನೆ ಮತ್ತು ಮೂರನೆ ದಿನ ಆಹಾರದ ಕುರಿತು ಸಾಂಪ್ರದಾಯಿಕ ಆಟ, ನಾಲ್ಕನೆ ದಿನ ಸಾಮಾಜಿಕ ಜವಾಬ್ದಾರಿ, ಐದನೆ ದಿನ ಯೋಗ ಮತ್ತು ಧ್ಯಾನ, ಹಾಗೂ ಆರನೆಯ ದಿನ ಆರೋಗ್ಯ ಜೀವನದ ಚಟುವಟಿಕೆ ನಡೆಸಿ ಈ ಸಪ್ತಾಹ ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಯಕ್ರಮದ ಕುರಿತಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಬಸಪ್ಪ ಬಿರಾದಾರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಮೇಲುಸ್ತವಾರಿ ಸಮಿತಿ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ,
ಶಿಕ್ಷಕ ಮಹಮ್ಮದ್ ಅಬ್ದುಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಕಾಂತ್ ದೇಶಮುಖ್, ಶಿವಪುತ್ರಪ್ಪ ವಿಶ್ವಕರ್ಮ, ಸಹಜನ ಬೇಗಂ, ವಿಜಯಲಕ್ಷೀ ಸಜ್ಜನ, ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ಮಧುಮತಿ ಕಾರ್ಯಕ್ರಮದ ನಿರೂಪಣೆಯನ್ನು ವಂದನಾರ್ಪಣೆಯನ್ನು ಶಿಕ್ಷಕಿ ಮಮತಾ ಮೇಡಂ ಅವರು ನೇರವೇರಿಸಿದರು.