ಸದೃಢ ಪ್ರಜಾಪ್ರಭುತ್ವ ವ್ಯವಸ್ಥಗೆ ಮತದಾನ ಜವಾಬ್ದಾರಿಯುತ ಹಕ್ಕಾಗಿದೆ

ರೋಣ,ಏ.18: ಮತದಾನ ಮಾಡದಿದ್ದರೂ ನಡೆಯುತ್ತದೆ ಎನ್ನುವ ಅಸಡ್ಡೆ ಬೇಡ, ಸದೃಡ ಪ್ರಜಾಪ್ರಭುತ್ವ ವ್ಯವಸ್ಥಗೆ ಮತದಾನ ಜವಾಬ್ದಾರಿಯುತ ಹಕ್ಕಾಗಿದೆ ಅದನ್ನು ಚಲಾಯಿಸುವ ಮೂಲಕ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿ ಎಂದು ಸಹಾಯಕ ನಿರ್ದೆಶಕ ರಿಯಾಜ್ ಖತೀಬ್ ಹೇಳಿದರು.

ಬೆಳವಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲ ಸಂಜಿವೀನಿ ಯೋಜನೆಯಡಿಯಲ್ಲಿ ನಡೆದ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೊಷ್ಕರ ನಡೆಯುವ ಸರಕಾರದ ಅಡಿಪಾಯವೇ ಮತದಾನ. ಸಂವಿಧಾನ ಬದ್ದವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಗಳು ಚಲಾಯಿಸುವಲ್ಲಿ ಯಾವುದೇ ಅಸಡ್ಡೆತನ ಮಾಡಬೇಡಿ. ಪ್ರತಿಯೊಬ್ಬರ ಮತವು ಅಮೂಲ್ಯವಾಗಿದ್ದು, ಶೇ 100% ಪ್ರತಿಶತ ಮತದಾನ ಗದಗ ಜಿಲ್ಲೆಯ ವಾಗ್ದಾನವಾಗಿದೆ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷ ಚೇತನರು ಹಿರಿಯ ನಾಗರಿಕರು ಮತದಾನ ಮಾಡುವಂತೆ ಕರೆ ನೀಡಿ, ಈ ವರ್ಷ ಚುನಾವಣಾ ಆಯೋಗವು ಮನೆಯಲ್ಲಿಯೇ ಇದ್ದು ಮತದಾನ ಮಾಡುವ ಅವಕಾಶವನ್ನು ವಿಶೇಷ ಚೇತನರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವಕಾಶವನ್ನು ಕಲ್ಪಿಸಿದೆ ಎಂದು ತಿಳಿಸಿದರು.

ಏಪ್ರಿಲ್ 1 ರಿಂದ ನರೇಗಾ ಕೂಲಿ ಮೊತ್ತವು 309 ರಿಂದ 316 ಕ್ಕೆ ಹೆಚ್ಚಿಸಲಾಗಿದೆ. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ಸಹ ಈ ಸಂದರ್ಭದಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಬಿಲ್ ಕಲೆಕ್ಟರ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.