ಸದೃಢ ದೇಹ, ಸದೃಢ ಮನಸ್ಸಿನ ನಿರ್ಮಾಣಕ್ಕೆ ಕ್ರೀಡೆ ಜೀವನದ ಭಾಗ : ಸಿಪಿಐ ಯಾತನೂರ

ಹುಮನಾಬಾದ :ನ.11: ವ್ಯಕ್ತಿ ಸದೃಢ ದೇಹ ಮತ್ತು ಸದೃಢ ಮನಸ್ಸಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರೀಡೆಗಳನ್ನು ಜೀವನದ ಭಾಗವಾಗಿ ಅಳವಡಿಸಿ ಕೊಳ್ಳುವುದು ಉತ್ತಮ ಎಂದು ಹುಮನಾಬಾದ ಸಿಪಿಐ ಮಲ್ಲಿಕಾರ್ಜುಜನ ಯಾತನೂರ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಾಲಿಬಾಲ್ ಪಟು ದಿ. ಚಂದ್ರಕಾಂತ ಶಾಂತಯ್ಯ ಚಕಪಳ್ಳಿ ಸ್ಮರರ್ಣಾಥ ಹಾಗೂ ದಿಪಾವಳಿ ಪ್ರಯುಕ್ತ ತಾಲೂಕ ಮಟ್ಟದ ವಾಲಿಬಾಲ್ ಪದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ. ಇಂತಹ ವ್ಯಕ್ತಿ ಮತ್ತು ವ್ಯಕ್ತಿತ್ವ ರೂಪಿಸುವ ಪ್ರತಿಭೆಯನ್ನು ಹೂರಹಾಕಲು ಇಂತಹ ಪದ್ಯಾವಳಿ ಸಹಕಾರಿಯಾಗಲಿದೆ. ಈ ಕುರಿತು ಪ್ರತಿಯೊಬ್ಬರು ಕ್ರೀಡೆಯಂತಹ ಪ್ರತಿಭೆಗಳ ಕಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆಗಳು ಪೂರಕ ಎಂಬುದನ್ನು ಮರೆತು ಪೂರ್ನ ಜೀವನ ಮೊಬೈಲ್‍ನಲ್ಲೆ ಕಾಲ ಹರಣ, ಅಂಕಗಳಿಕೆ, ಸರ್ಕಾರಿ ಉದ್ಯೋಗದ ಕಡೆಗೆ ಆಧ್ಯತೆ ನೀಡುತ್ತಿದ್ದೆವೆ. ಆದರೆ ಕ್ರೀಡೆಗಳ ಕಡೆಗೆ ಮಕ್ಕಳನ್ನು ಉತ್ತೇಜಿಸುವ, ಪ್ರೋತ್ಸಾಹಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿರೇಮಠ ಸಂಸ್ಥಾನದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ಆಶೀರ್ವಚನದಲ್ಲಿ ಮಾತನಾಡಿ. ಆಧುನಿಕ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯಲ್ಲಿ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆಧ್ಯತೆ ನೀಡಬೇಕಾಗಿದೆ. ಅನೇಕ ಸೌಲಭ್ಯಗಳ ಕೊರತೆಯಲ್ಲಿಯೂ ಸಿದ್ದಣ್ಣ ಚಕಪಳ್ಳಿಯವರು ಕ್ರೀಡಾ ಪ್ರತಿಭೆ ಮರೆಯುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಮಕ್ಕಳನ್ನು ಕೇವಲ ಬೌದ್ದಿಕ ಶಕ್ತಿ ಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಜ್ಞಾನ ಸಂಪಾದನೆಯ ಜೊತೆಗೆ ವ್ಯಕ್ತಿತ್ವದ ವಿಕಸನಕ್ಕೆ ಸಂಗೀತ, ನೃತ್ಯಮ ಚಿತ್ರಕಲೆ, ನಾಟಕ ಕ್ರೀಡೆ ಸಾಂಸ್ಕøತಿಕ ಬೆಳೆವಣಿಗೆಯೂ ಬೇಕು. ಅದರೊಂದಿಗೆ ದೇಶ ಪ್ರೇಮ, ದುರ್ಬಲರಿಗೆ ಸಹಾಯ ಸಹಕಾರವನ್ನು ನೀಡುವುದನ್ನೂ ಕಲಿಯಬೇಕು. ಕ್ರೀಡಾಪಟುಗಳು ಕ್ರೀಡಾ ನಿಯಮಗಳಿಗೆ ಬದ್ಧವಾಗಿ ಮತ್ತು ನೈಜ ಕ್ರೀಡಾ ಮನೋಭಾವದಿಂದ, ಸ್ಪರ್ಧೆಯ ಹಿರಿಮೆಗಾಗಿ ಭಾಗವಹಿಸಬೇಕು.

ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಪ್ರಾಸ್ತಾವಿಕ ಮಾತನಾಡಿ. ಇಂದೀನ ಯುವಕರು ಕ್ರೀಡೆಗಳ ಬಗ್ಗೆ ತಾತ್ಸರ ಮನೋಭಾವಕ್ಕೆ ಜಾರುತ್ತಿದ್ದಾರೆ ಅದು ಸಲ್ಲದು. ಕ್ರೀಡೆ ಪ್ರತಿಯೊಬ್ಬರ ಮಾನಸಿಕ ಮತ್ತು ದೈಹಿಕ ಶಕ್ತಿ ಬೆಳೆಸುತ್ತದೆ. ಕಲಿಕೆಗೂ ಕ್ರೀಡೆಗಳು ಪ್ರೇರಣೆಯಾಗಲಿವೆ. ನಿತ್ಯವೂ ಕ್ರೀಡೆಯಲ್ಲಿ ಭಾಗವಹಿಸಿ ದೇಹವನ್ನು ದಣಿಸುವುದರಿಂದ ಮಾರಕ ರೋಗಗಳು ದೂರವಾಗುತ್ತವೆ. ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತ್ಯವಶ್ಯಕವಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆದರ್ಶವಾಗಿ ಬಳಸಿಕೊಳ್ಳಬೇಕು ಎಂದರು.

ಉದ್ಯಮಿ ರಮೇಶ ಜಾಧವ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಸುರೇಶ ಸೀಗಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಸಚಿದಾನಂದ ಮಠಪತಿ, ಡಾ. ರಾಹುಲ್ ಪಾಟೀಲ್, ಸದಾನಂದ ಖಮಿತ್ಕರ್, ಆರ್ಯಸಮಾಜ ಕಾರ್ಯದರ್ಶಿ ಗೋವಿಂದಸಿಂಗ್ ತಿವಾರಿ, ಕ್ರೀಡಾ ಆಯೋಜಕ ಸಿದ್ದಣ್ಣಾ ಚಕಪಳ್ಳಿ, ಗಣೇಶಸಿಂಗ್ ತಿವಾರಿ, ಪ್ರಶಾಂತ ಸೂರ್ಯವಂಶಿ, ಡಾ ಸದಾನಂದ ಪತ್ರಿ, ರವಿಕುಮಾರ ಆರ್ಯ, ಸಾಯಿನಾಥ ಆರ್ಯ, ಸಂಜೀವಕುಮಾರ ಸಜ್ಜನಶಟ್ಟಿ, ಶರಣಪ್ಪ ಗುಡ್ಡಾ ಇದ್ದರು.