ಸದೃಢ ದೇಹಕ್ಕೆ ನೀರು ಮತ್ತು ಆಹಾರ ನಿಯಮಿತವಾಗಿರಲಿ : ಡಾ.ಪೂಜಾ ಪಾಟೀಲ

ಕಲಬುರಗಿ: ಮಾ.8: ಪ್ರತಿ ದಿನ ನಿಯಮಿತವಾದಂತಹ ನೀರು ಮತ್ತು ಕ್ರಮಬದ್ದವಾದ ಆಹಾರ ಸೇವನೆಯಿಂದ ಸದೃಢ ದೇಹವನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂದು ಖ್ಯಾತ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯರಾದ ಡಾ. ಪೂಜಾ ಪಾಟೀಲ ಅಭಿಪ್ರಾಯ ಪಟ್ಟರು.
ನಗರದ ಪ್ರಿಯದರ್ಶನ ಪ್ರೌಢಶಾಲೆಯಲ್ಲಿ “ವಿಶ್ವ ಮಹಿಳಾ ದಿನ”ದ ನಿಮಿತ್ಯವಾಗಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪ್ರತಿ ದಿನ ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಯೋಗದಿಂದ ಮಾನಸಿಕ ನೆಮ್ಮದಿಯ ಜೊತೆಗೆ ನೆನಪಿನ ಶಕ್ತಿಯು ಸಹ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಬೇಕು. ಚಂಚಲ ಮನಸ್ಸಿಗೆ ಹೆಚ್ಚು ಒತ್ತು ಕೊಡದೆ, ಸಕರಾತ್ಮಕ ಯೋಚನೆ ಕಡೆಗೆ ಮನಸ್ಸು ಸಾಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಿಯದರ್ಶಿನಿ ಪ್ರೌಢಶಾಲೆಯ ಶಿಕ್ಷಕಿ ಸಿಂಧೂಮತಿ ಬೋಸ್ಲೆ ಅವರು, ಇಂದಿನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮೃದ್ಧವಾದ ಆರೋಗ್ಯವನ್ನು ಸದೃಢವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಪ್ರೌಢಶಾಲೆಯ ಪ್ರಾಚಾರ್ಯರಾದ ಚಂದ್ರಶೇಖರ ಪೆÇಲಕಪಲ್ಲಿ, ಉಪನ್ಯಾಸಕರಾದ ಮಹೇಶಕುಮಾರ ತಳವಾರ ಪ್ರದೀಪಕುಮಾರ ಸುಂದರಕರ ಹಾಗೂ ಪುಷ್ಪಾಂಜಲಿ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.