ಸದೃಢ ದೇಹಕ್ಕೆ ಗಟ್ಟಿ ಮನಸ್ಸು ಅಗತ್ಯ

ಮಧುಗಿರಿ, ಮಾ. ೨೭- ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದು ತಹಶೀಲ್ದಾರ್ ಸ್ಟೇಲಾ ವರ್ಗಿಸ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ’ಮಕ್ಕಳಿಗೆ ಪೋಷನ್ ಪಕ್ವಾಡ ಆಚರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಪೌಷ್ಠಿಕಯುಕ್ತ ಮಗುವೇ ಮುಂದಿನ ಸಶಕ್ತ ಭಾರತದ ನಿರ್ಮಾತೃ ಎಂಬ ಧ್ಯೇಯವಾಕ್ಯಗಳ ಬಗ್ಗೆ ತಿಳಿಸಿದರು.
ಸಿಡಿಪಿಒ ಅನಿತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರದ ಬಗ್ಗೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಹನುಮಂತರಾಯಪ್ಪ, ಬಿಆರ್‌ಸಿ ಮಂಜುನಾಥ್, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಮಮತಾ, ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.