ಸದೃಢ ಆರೋಗ್ಯ ಗಳಿಸಬೇಕಾದರೆ ದುಶ್ಚಟಗಳಿಂದ ದೂರವಿರಬೇಕು: ಪ್ರೇಮಾನಂದ

ವಿಜಯಪುರ:ಮಾ.25: ಹಣ, ವಿದ್ಯೆಗಳಿಸಬಹುದು ಸದೃಢ ಆರೋಗ್ಯಗಳಿಸಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಎಂದು ಪ್ರೇಮಾನಂದ ಬಿರಾದಾರ ಹೇಳಿದರು.

ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಬಹಳ ಮುಖ್ಯವಾದದ್ದು ಆದ್ದರಿಂದ ಯುವಕರು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ ಹೇಳಿದರು.

ಅವರು ನಗರದ ಕನಕದಾಸ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನೆಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಡ್ಸ್ ನಿರೋಧಕ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಆಸ್ಪತ್ರೆಯ ಪಿ.ಪಿ.ಟಿ.ಸಿ.ಟಿ. ವಿಭಾಗ ಹಾಗೂ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ವಿಜಯಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ 2ನೇ ಹಂತದ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಲ್ವಿಚಾರಕರಾದ ಬಾಬುರಾವ ತಳವಾರ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಚ್ಚಿನ್ ಚವ್ಹಾಣ, ವಿಜಯಕುಮಾರ ಕಾಳಶೆಟ್ಟಿ, ಮೋಹನ ಮೇಟಿ, ಆಪ್ತ ಸಮಾಲೋಚಕ ರವಿ ಕಿತ್ತೂರ, ಆರತಿ ಹಳ್ಳಿ, ವಿಠ್ಠಲ ವಾಲಿಕಾರ, ತಸ್ಲೀಮಾ ನದಾಫ್, ಸುರೇಶ ಜತ್ತಿ ಇತರರು ಉಪಸ್ಥಿತರಿದ್ದರು.

100ಕ್ಕಿಂತ ಹೆಚ್ಚು ಜನ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಂಡು ಇದರ ಸದುಪಯೋಗ ಪಡಿಸಿಕೊಂಡರು.