ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅವಶ್ಯಕ:ಸುಬೇದಾರ

???????????????????????????????????????????????????????????????????????????????????????????????????????????????????????????????

ಆಳಂದ:ಮಾ.25: ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅವಶ್ಯಕ ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಹೇಳಿದರು.ಬುಧವಾರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪೋಷಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರ ನಾನಾ ಯೋಜನೆಗಳು ಜಾರಿಗೆ ತರುವ ಮೂಲಕ ಶಿಶು ಅಭಿವೃದ್ದಿ ಯೋಜನೆಗೆ ಅನುದಾನ ನೀಡುತ್ತಿದೆ ಇದರ ಲಾಭವನ್ನು ಜನರು ಪಡೆಯಬೇಕು ಎಂದು ಸಲಹೆ ನೀಡಿದರು.ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಉಪನ್ಯಾಸ ನೀಡಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಜತೆಗೆ ತರಕಾರಿ,ಹಣ್ಣು ಹಂಪಲು,ಮೊಳಕೆ ಕಾಳು ಸೇವನೆಯಿಂದ ಹೊಸರಕ್ತ ಉತ್ಪತ್ತಿಯಾಗುತ್ತದೆ ಎಂದು ವಿವರಿಸಿದರು.
ಸಿಡಿಪಿಒ ಶಿವಮೂರ್ತಿ ಕುಂಬಾರ ಅಧ್ಯಕ್ಷತೆವಹಿಸಿ ಮಾತನಾಡಿ ಶಿಶುಗಳು,ಬಾಣಂತಿಯರು,ಗರ್ಭಿಯಣಿಯರಿಗಾಗಿ ಸರಕಾರ ಪೋಷಣಾ ಅಭಿಯಾನ ಮೂಲಕ ಪೌಷ್ಟಿಕ ಆಹಾರ ಕುರಿತು ಅಂಗನವಾಡಿ ಕಾರ್ಯಕರ್ತೆಯರು,ಮೇಲ್ವಿಚಾರಕಿಯರು ಜನ ಜಾಗೃತಿ ಮೂಡಿಸಬೇಕೆಂದರು.ಸಾಕ್ಷರತಾ ತಾಲೂಕು ಸಮಿತಿ ಸದಸ್ಯ ಡಿ.ಎಂ.ಪಾಟೀಲ್,ಹಿರಿಯ ಮೇಲ್ವಿಚಾರಕಿ ಬೇಬಿನಂದಾ ಪಾಟೀಲ್,ಸುರೇಖಾ ಪೂಜಾರಿ,ಮೇಲ್ವಿಚಾರಕಿ ಭಾಗಿರಥಿ ಯಲಶಟ್ಟಿ,ಮಹಾದೇವಿ ವಚ್ಚೆ,ಕಸ್ತೂರಿಬಾಯಿ ಮುನ್ನೊಳಿ,ಯಶೋಧಾ,ಮೀನಾಕ್ಷಿ,ಕವಿತಾ ಪಾಟೀಲ್,ಲಕ್ಷ್ಮೀ ನಾಟೀಕಾರ,ನೇಹಾ ಜಾಗಿರದಾರ,ನಂದಾ, ಕಲಾವತಿ,ಸುನಂದಾ,ಪೋಷಣಾ ಅಭಿಯಾನ ತಾಲೂಕು ಸಂಯೋಜಕ ಸಂಜೀವಕುಮಾರ,ದೇವಿಕಾ ಭಾಗವಹಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಸಾಧನೆಗೈದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.