ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿ 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.22; ಮಕ್ಕಳು ತಮ್ಮ ಓದಿನ ಜೊತೆಗೆ  ಹೆಚ್ಚಾಗಿ ಕ್ರೀಡಾ ಚಟುವಟಿಕೆ ಗಳಲ್ಲಿಯೂ ಭಾಗವಹಿಸುವುದರಿಂದ ಆರೋಗ್ಯವಂತರಾಗಿರಬಹುದು ಎಂದು ದಾವಣಗೆರೆ ಕ್ರೀಡಾ ಪಟುಗಳ ಸಂಘದ ಅಧ್ಯಕ್ಷ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದರು.ನಗರದ ಪಿ.ಜೆ.ಬಡಾವಣೆ ಯಲ್ಲಿರುವ ಸಂತ ಪೌಲರ ಶಾಲೆಯಲ್ಲಿ  ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಓದಿನ ಜೊತೆಗೆ  ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ  ವಿಜೇತರಾಗಿ ಸಾಧನೆ ಮಾಡಿ ನಿಮ್ಮ  ಶಾಲೆಗೆ,  ಪೋಷಕರಿಗೆ ಕೀರ್ತಿ ತನ್ನಿರಿ ಎಂದು ಶುಭ ಹಾರೈಸಿದರು.ಸಂತ ಪೌಲರ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಮಾರ್ಜರಿ, ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಸಿಸ್ಟರ್ ಸಮಂತ, ಕನ್ನಡ ಮಾಧ್ಯಮ ವಿಭಾಗದ ಸಿಸ್ಟರ್ ಸುಪ್ರಿಯಾ, ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಸಿಸ್ಟರ್ ವೆನಿಸಾ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯ ರಾದ ವೈಲೆಟ್, ದೈಹಿಕ ಶಿಕ್ಷಕರಾದ ರೀಟಾ , ಟಿ.ಎಂ.ರವೀಂದ್ರಸ್ವಾಮಿ ,ಗೋವಿಂದಪ್ಪ , ಪ್ರವೀಣ್ , ಶಿಕ್ಷಕರಾದ ಕಿರಣ್ , ಎಂ.ಕೆ.ಮಂಜುಳ, ರಾಧಾ , ಅಮಲ, ಭಾಗ್ಯನಾಥನ್,ಎಲೀಜ, ಸೂಸಿಮೇರಿ,ಫಿಲೋಮಿನ, ನಯನ ,ರಾಗಿಣಿ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು ಭಾಗವಹಿಸಿದ್ದರು.