ಸದೃಢ ಆರೋಗ್ಯಕ್ಕಾಗಿ ಸಸ್ಯಾಹಾರ ಸೇವನೆ ಅಗತ್ಯ

ಕಲಬುರಗಿ,ಜೂ.17:ವ್ಯಕ್ತಿ ದೈಹಿಕ, ಮಾನಸಿಕವಾಗಿ ಆರೋಗ್ಯಕರವಾಗಿರಬೇಕಾದರೆ, ಆಹಾರವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶುದ್ಧ, ಸ್ವಚ್ಛವಾಗಿರುವ ತರಕಾರಿ, ಹಣ್ಣುಗಳು, ಧಾನ್ಯಗಳು ಸೇರಿದಂತೆ ಮುಂತಾದ ಸಸ್ಯಹಾರಗಳ ನಿಯಮಿತ, ಸೂಕ್ತ ಕಾಲಕ್ಕೆ ಸೇವಿಸುವದರಿಂದ ವ್ಯಕ್ತಿಗೆ ಬೇಕಾದ ಪ್ರೋಟಿನ್ಸ್, ಖನಿಜಗಳು, ಜೀವಸತ್ವಗಳು ದೊರೆಯುವ ಮೂಲಕ ದೈಹಿಕ, ಮಾನಸಿಕವಾಗಿ ಆರೋಗ್ಯಯುತವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಸಮೀಪದ ಆಳಂದ ರಸ್ತೆಯ ಪಟ್ಟಣ ಕ್ರಾಸ್ ಸಮೀಪವಿರುವ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ ಅವರ ತೋಟದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ತರಕಾರಿ ಸೇವನೆ ದಿನಾಚರಣೆ’ಯಲ್ಲಿ ಸಾವಯುವ ತರಕಾರಿ ಬೆಳೆಗಾರ ಧೂಳಗೊಂಡ ದಂಪತಿಗೆ ಜರುಗಿದ ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ಬಹುತೇಕ ತರಕಾರಿಯು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿ ಹಾಗೂ ಹೆಚ್ಚಿನ ಪೋಷಕಾಂಶಗಳು ಹೊಂದಿವೆ. ಧಾನ್ಯಗಳು, ಕಾಯಿಪಲ್ಲೆ, ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಸಮತೋಲಿತವಾದ ಆಹಾರವು ದೊರೆಯುತ್ತದೆ. ತೂಕ ನಿರ್ವಹಣೆಯಾಗಿ, ದೇಹವು ರೋಗಮುಕ್ತವಾಗಿರಲು ಸಾಧ್ಯವಿರುವದರಿಂದ ಸಸ್ಯಾಹಾರಿಗಳಾಗೋಣ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ, ನಾನು ಯಾವುದೇ ರೀತಿಯ ರಾಸಾಯನಿಕ, ಕೀಟನಾಶಕಗಳ ಬಳಕೆ ಮಾಡದೆ, ತಿಪ್ಪೆ ಮತ್ತು ಹಸಿರು ಗೊಬ್ಬರ ಬಳಕೆ ಮಾಡಿ ತರಕಾರಿ, ಹಣ್ಣುಗಳು, ವಿವಿಧ ಬೆಳೆಗಳನ್ನು ಬೆಳೆಯುತ್ತೇನೆ. ಇದು ಪರಿಸರ ಮಾಲಿನ್ಯ ರಹಿತವಾಗಿದ್ದು, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆದ್ದರಿಂದ ಜನರು ಸಿರಿ ಧಾನ್ಯಗಳು, ಸಾವಯುವ ಬೆಳೆಗಳನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಪ್ರಮುಖರಾದ ಶಶೀಕಲಾ ಜಿ.ಧೂಳಗೊಂಡ, ಮಲ್ಲಿಕಾರ್ಜುನ ಹಿಪ್ಪರಗಿ, ರಾಚಣ್ಣ ಧೂಳಗೊಂಡ, ನಾಗಮ್ಮ ಸರಸಂಬಿ, ಸುಧಾ ಕುಯ್ಯಾ, ಬಾಬುರಾಯ, ಕಲ್ಯಾಣಿ ಬಂಕೂರ್ ಸೇರಿದಂತೆ ಇನ್ನಿತರರಿದ್ದರು.