
ಕಲಬುರಗಿ:ಸೆ.5: ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಿ, ಅವರನ್ನುರಾಷ್ಟ್ರದ ಶ್ರೇಷ್ಠ ಸಂಪನ್ಮೂಲಗಳನ್ನಾಗಿಸುತ್ತಾರೆ. ಸಮಾಜದಲ್ಲಿಗುರುವಿನ ಪಾತ್ರ ನಿರ್ವಹಿಸುತ್ತಾರೆ. ಸದೃಢರಾಷ್ಟ್ರದ ನಿರ್ಮಾಣಕ್ಕೆಶಿಕ್ಷಕರ ಕೊಡುಗೆಅನನ್ಯವಾಗಿದೆಎಂದುಜೇವರ್ಗಿಯ ಸರ್ಕಾರಿ ಪದವಿ ಪೂರ್ವಕಾಲೇಜಿನಸಿಬಿಸಿ ಉಪಾಧ್ಯಕ್ಷರವೀಂದ್ರಕುಮಾರ ವೈ.ಕೋಳಕೂರ ಹೇಳಿದರು.
ಜೇವರ್ಗಿಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪಿಯುಕಾಲೇಜಿನಲ್ಲಿಮಂಗಳವಾರ ವಿದ್ಯಾರ್ಥಿಗಳು ಏರ್ಪಡಿಸಿದ್ದ ‘ಶಿಕ್ಷಕರ ದಿನಾಚರಣೆ’ಯಕಾರ್ಯಕ್ರಮದಲ್ಲಿಎಲ್ಲಾಉಪನ್ಯಾಸಕರನ್ನು ಸತ್ಕರಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಮಹಮ್ಮದ್‍ಅಲ್ಲಾಉದ್ದೀನ್ ಸಾಗರ ಮಾತನಾಡಿ, ದೇಶಕ್ಕೆಡಾ.ಸರ್ವಪಲ್ಲಿರಾಧಾಕೃಷ್ಣನ್‍ಅವರಕೊಡುಗೆಅಪಾರವಾಗಿದೆ. ನಮ್ಮ ಪ್ರದೇಶ ಹಿಂದುಳಿದಿಲ್ಲ. ಅನೇಕ ಪ್ರತಿಭೆಗಳು ಉನ್ನತವಾದ ಸಾಧನೆಯನ್ನು ಮಾಡುತ್ತಿದ್ದಾರೆಂದರೆ, ಅದಕ್ಕೆಈ ಭಾಗದ ಶಿಕ್ಷಕರ ಪರಿಶ್ರಮವೇಕಾರಣವಾಗಿದೆ.ಶಿಕ್ಷಕರು ಪಠ್ಯದಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ,ಮಾನವೀಯ ಮೌಲ್ಯಗಳ ಗುಣಗಳನ್ನು ಬಿತ್ತುವಬೆಳೆಸುವಕಾರ್ಯಮಾಡಬೇಕು. ಮೌಢ್ಯತೆಯಿಂದ ಹೊರಬಂದು ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಮುಖಂಡ ಪ್ರೇಮಾನಂದ ಸಾಹು ಶೆಟಗಾರ, ಕಾಲೇಜಿನಉಪನ್ಯಾಸಕರಾದನಯಿಮಾ ನಾಹಿದ್,ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ರೇಣುಕಾಚಿಕ್ಕಮೇಟಿ, ಮಲ್ಲಪ್ಪರಂಜಣಗಿ, ಮಲ್ಲಿಕಾರ್ಜುನದೊಡ್ಡಮನಿ, ರಂಜಿತಾಠಾಕೂರ, ಶಮೀನಾ ಬೇಗಂ, ಸಿದ್ಮಮ್ಮ, ನಾಗಮ್ಮ, ಸಾಹೇಬಗೌಡ ಪಾಟೀಲ, ನುಝಹತ್ ಪರ್ವಿನ್, ಪ್ರ.ದ.ಸ ನೇಸರ ಎಂ.ಬೀಳಗಿಮಠ, ದ್ವಿದ.ಸ ರಾಮಚಂದ್ರಚವ್ಹಾಣ, ಸೇವಕ ಭಾಗಣ್ಣ ಹರನೂರಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.