ಸದುರುದ್ದೀನ್ ಬಾಬಾ ದರ್ಗಾದಲ್ಲಿ ಈದ್ ಮಿಲಾದ್

ಬಳ್ಳಾರಿ,ನ.2- ನಗರದ ರೂಪನಗುಡಿ ರಸ್ತೆಯ ಸದರುದ್ದೀನ್ ಬಾಬಾ ದರ್ಗಾದಲ್ಲಿ ಈದ್ ಮಿಲಾದ್ ಅಂಗವಾಗಿ ಜಷ್ಟಾನೆ ಮಿಲಾದ್ ನಬಿ ಆಚರಿಸಲಾಯಿತು.
ದರ್ಗಾದ ಟ್ರಸ್ಟಿ ಮತ್ತು ಮುಜಾವರುಗಳಾದ ಅಬ್ದುಲ್ ಸತ್ತಾರ್ ಅವರ ಸಮ್ಮುಖದಲ್ಲಿ ಈ‌ಕಾರ್ಯ ನೆರವೇರಿತು.
ಈ ಸಂದರ್ಭದಲ್ಲಿ ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಮುಖಂಡರುಗಳಾದ ಪ್ರೂಟ್ ಪೀರ್ ಸಾಬ್, ಬೊಂ ಬೊಂ ದಾದಾ, ಅಬ್ದುಲ್ ಜಬ್ಬಾರ್ ಮೊದಲಾದವರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು