(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.02: :ಮಾಧ್ಯಮಕ್ಷೇತ್ರ ಸದಾ ಹೊಸತನ್ನು ಬಯಸುತ್ತದೆ. ಇಂದಿನ ಆಧುನಿಕ ಮಾಧ್ಯಮದಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಿದವರಿಗೆ ಮಾತ್ರ ಕ್ಷೇತ್ರದಲ್ಲಿ ಭವಿಷ್ಯವಿದೆಂದು ಹುಬ್ಬಳ್ಳಿಯ ಪತ್ರಕರ್ತೆ ಕಲಾವತಿ ಬೈಚಬಾಳ ಹೇಳಿದರು.
ಅವರು ನಿನ್ನೆ ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ. ‘ಮಾಧ್ಯಮ ಕ್ಷೇತ್ರಗಳಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘ಮಾಧ್ಯಮ ಕ್ಷೇತ್ರವು ಈಗ ಸೃಜನಾತ್ಮಕ ಬರವಣಿಗೆ ಜೊತೆಗೆ ಡಿಜಿಟಲ್ ಮಾಧ್ಯಮದ ಅಗತ್ಯತೆಗಳನ್ನು ಬಯಸುತ್ತಿದೆ. ನಿರೀಕ್ಷೆಗಳಿಗೆ ತಕ್ಕಂತೆ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ವೃತ್ತಿಯಲ್ಲಿ ಎದುರಾಗಬಹುದಾದ ಸವಾಲುಗಳಿಗೂ ಮಾನಸಿಕವಾಗಿ ಸಿದ್ಧರಾಗಬೇಕೆಂದು ಸಲಹೆ ನೀಡಿದರು.
ಜೀವನದಲ್ಲಿ ಸ್ಅ ಕಲಿಕಾ ಹಂಬಲ ಇರಬೇಕು.ಬಹುಮುಖ ಪ್ರತಿಭೆಗಳಾಗಿದ್ದಾಗ ಮಾತ್ರ ಮಾಧ್ಯಮದ ಮನೆಗಳು ಉದ್ಯೋಗಾವಕಾಶ ನೀಡುತ್ತವೆ’ ಎಂದು ಅವರು ‘ಸುದ್ದಿ, ನೀಡುವ ಧಾವಂತದಲ್ಲಿ ವಿಶ್ವಾಸಾರ್ಹತೆ ಮತ್ತು ವಾಸ್ತವತೆಯನ್ನು ಮರೆಯಬಾರು. ‘ಪತ್ರಿಕೋದ್ಯಮ, ಫಿಲ್ಮೋಗ್ರಾಫರ್, ಫೋಟೋಗ್ರಾಫರ, ಗ್ರಾಫಿಕ್ ಡಿಸೈನ್, ಮಿಡಿಯಾ ಮಾರ್ಕೆಟಿಂಗ್ ಮತ್ತು ಜಾಹೀರಾತು, ಡಿಜಿಟಲ್ ಮಾಧ್ಯಮದಲ್ಲಿ ಹೇರಳ ಅವಕಾಶಗಳಿವೆ.
ಸಂವಹನ ಕೌಶಲ್ಯ ದ ಜೊತೆಗೆ ಪ್ರತಿಯೊಂದು ವಿಚಾರವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಹಾಗೂ ಕ್ರಿಯಾಶೀಲವಾಗಿ ಯೋಚಿಸುವ ಮನಸ್ಥಿತಿ ಅಗತ್ಯ. ಪ್ರಕಾಶನ ಕ್ಷೇತ್ರದಲ್ಲಿ ಉದ್ಯೋಗ ಭವಿಷ್ಯ ಹುಡುಕುವವರಿಗೆ ಪಬ್ಲಿಷಿಂಗ್ ಮತ್ತು ಎಡಿಟಿಂಗ್ ನಲ್ಲಿ ಸ್ಪೆಷಲೈಜೇಷನ್ ಮಾಡ ಬಹುದು. ನಿಯತಕಾಲಿಕೆ, ಪುಸ್ತಕಗಳನ್ನು ಪ್ರಕಟಿಸಬಹುದು.
ಗ್ರಾಫಿಕ್ಸ್ ಡಿಸೈನಿಂಗ್, ಕಾಪಿ ಎಡಿಟಿಂಗ್ ಮತ್ತು ಕಾನೂನು ವಿಷಯಗಳ ಬಗ್ಗೆ ಮಾಹಿತಿ ಅಗತ್ಯ’ ಎಂದು ವಿವರಿಸಿದರು.
ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹೊನ್ನೂರಾಲಿ ಮಾತನಾಡಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೈ. ಜನಾರ್ಧನ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ.ಎಚ್.ಕೆ. ಮಂಜುನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೈಲಜಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತ್ ಗಿರಿದಿನ್ನಿ, ಪತ್ರಿಕೋದ್ಯಮ ವಿಭಾಗದ ಟಿ.ಜಯರಾಮ್, ಗಿರೀಶ್ ಗೌಡ ಉಪಸ್ಥಿತರಿದ್ದರು.
ಸುಮ ಮತ್ತು ತಂಡ ಪ್ರಾರ್ಥಿಸಿದರೆ. ಎಸ್. ಸಂಜನಾ ಎನ್. ಮಹೇಶ್ ಸ್ವಾಗತಿಸಿದರು.
One attachment • Scanned by Gmail