ಸದಾ ರೈತರ ಜನ ಸೇವೆಗಾಗಿ ನಾನು ಸಿದ್ದ – ನಾಡಗೌಡ

ಸಿಂಧನೂರು.ಜ.೬-ತಾಲೂಕಿನ ಸಮಸ್ತ ಜನರ ಹಾಗೂ ರೈತರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿರುವೆ ವಿನಹ ನನ್ನ ಸ್ವಾರ್ಥ ಸಾಧನೆಗೆ ಅಲ್ಲ ಎಂಬುದನ್ನು ವಿರೋಧ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ವಾಸುದೇವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ನಾಡಗೌಡರ ೬೪ ನೇ ಹುಟ್ಟುಹಬ್ಬ ಹಾಗೂ ನೂತನ ಗ್ರಾಮಪಂಚಾಯತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ದೂರವಾಣಿಯಿಂದ ಒಬ್ಬ ವ್ಯಕ್ತಿಯ ಜೀವ ಉಳಿಯುತ್ತದೆ ಎನ್ನುವ ಕಾರಣದಿಂದ ನನ್ನ ದೂರವಾಣಿ ೨೪ಗಂಟೆ ಚಲನೆಯಲ್ಲಿ ಇರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣ ಇಡಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮಾದರಿಯಾಗಿದ್ದು ಗ್ರಾಮೀಣ ಅಭಿವೃದ್ಧಿ ಸಚಿವ ನಜೀರ್ ಸಾಬ್‌ರ ಕನಸಿನ ಕೂಸೆ ಇಂದು ಗ್ರಾಮಗಳಲ್ಲಿ ಬೋರವೆಲ್ ಕೊರೆದು ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಆದ್ದರಿಂದ ನಜೀರ್ ಸಾಬ್‌ರನ್ನು ನೀರಸಾಬ್ ಎಂದು ಕರೆಯಲಾಗುತ್ತದೆ.
ಇಂದೇ ಮಂಡಲ ಪ್ರಧಾನರಿಗಿದ್ದ ಅಧಿಕಾರ ಇಂದಿನ ಮಂತ್ರಿಗಳಿಗಿಲ್ಲ ಅಧಿಕಾರಿಗಳ ಸಂಬಳ ಮಂಡಲ ಪ್ರಧಾನರೆ ಮಾಡುತ್ತಿದ್ದು, ಈಗಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು ಒಂದು ಬಿಲ್ಲಿಗಾಗಿ ಪಿಡಿಓಗಳ ಚೀಲ ಹಿಡಿದು ಅವರ ಹಿಂದೆ ತಿರುಗುವ ಕೆಟ್ಟ ಪರಿಸ್ಥಿತಿ ಒದಗಿಬಂದಿದೆ ಇದು ಬದಲಾಗಬೇಕು ಅಧಿಕಾರಿಗಳ್ಳನ್ನು ಉಪಯೋಗಿಸಿಕೊಂಡು ಗ್ರಾಮಪಂಚಾಯತ ಸದಸ್ಯರು ಗ್ರಾಮದ ಅಭಿವೃದ್ಧಿ ಮಾಡುವ ಮೂಲಕ ಪ್ರಾಮಾಣಿಕವಾಗಿ ಜನಸೇವೆ ಮಾಡಿ ಎಂದು ಕರೆ ನೀಡಿದರು.
ತಾಲೂಕಿನಲ್ಲಿ ಇಲ್ಲಿತನಕ ಅಧಿಕಾರ ನಡೆಸಿದ ರಾಜಕಾರಣಿಗಳು ಗ್ರಾಮಗಳ ಅಭಿವೃದ್ಧಿ ಮಾಡಿರಲಿಲ್ಲ ನಾನು ಶಾಸಕನಾದ ಮೇಲೆ ಕುಗ್ರಾಮಗಳು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಿಮೆಂಟ್ ರಸ್ತೆಗಳು, ಕುಡಿಯುವ ನೀರು, ಶಾಲೆ ಕಟ್ಟಡಗಳನ್ನು ಕಟ್ಟಿಸಿದ್ದೇನೆ.
ನಾನು ಮಾಡಿದ ರಸ್ತೆಗಳಿಗೆ ಇಲ್ಲಿತನಕ ಒಂದು ಪುಟ್ಟಿ ಮರಂ ಹಾಕಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ನಾಡಗೌಡ ತಾಲೂಕಿನಲ್ಲಿರುವ ಹಳ್ಳಿಗಳಿಗೆ ರಸ್ತೆಗಳು, ಶಾಲೆಗಳು, ಕುಡಿಯುವ ನೀರು ಒದಗಿಸುವುದೇ ನನ್ನ ಕನಸು ಮುಂದಿನ ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿ ಕೊಡುತ್ತೇನೆಂದು ಭರವಸೆ ನೀಡಿದರು.
ರೈತರಿಗೆ ಸರ್ಕಾರಗಳು ಯಾವುದೇ ಸೌಲಭ್ಯ ಕೊಡದಿದ್ದರೂ ಪರವಾಗಿಲ್ಲ ವಿದ್ಯುತ್, ನೀರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ಸಾಕು ರೈತರು ಇಡಿ ದೇಶಕ್ಕೆ ಅನ್ನ ನೀಡುತ್ತಾರೆ ನಾನು ಬೇರೆ ರಾಜಕಾರಣಿಗಳಂತೆ ರೈತಪರ ಎಂದು ಡೋಂಗಿತನ ತೋರಿಸದೆ ಅಧಿಕಾರ ಇರಲಿ ಬಿಡಲಿ ಸದಾ ರೈತರ ಹಾಗೂ ಜನರ ಆರೋಗ್ಯ ಕಾಪಾಡುವದೇ ನನ್ನ ಆಧ್ಯಾ ಕರ್ತವ್ಯವಾಗಿದೆ ಎಂದ ಅವರು ನಾನು ಕ್ಷೇತ್ರದ ಅಭಿವೃದ್ದಿಗಾಗಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಮನವಿಲಿಸಿ ಅನುದಾನ ತರುತ್ತಿದ್ದೇನೆ ನಾನು ಬಿಜೆಪಿ ಸೇರಿದಂತೆ ಉಳಿದೆಲ್ಲ ರಾಜಕೀಯ ಪಕ್ಷದ ನಾಯಕರ ಜೊತೆ ಉತ್ತಮ ರಾಜಕೀಯ ಸಂಭಂದ ಬೆಳೆಸಿಕೊಂಡಿದ್ದೇಬೆ ಆದ್ದರಿಂದ ನಾನು ಬಿಜೆಪಿ ಮುಖಂಡರನ್ನು ಭೇಟಿಮಾಡುವದರಿಂದ ಬಿಜೆಪಿ ಪಕ್ಷಕ್ಕೆ ಹೋಗುತ್ತಾರೆ ಎನ್ನುವ ವಿಷಯ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ನಾಡಗೌಡ ಹೇಳಿದರು
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪಕ್ಷದ ಅಧ್ಯಕ್ಷರಾದ ಎಮ್ ವಿರುಪಾಕ್ಷಿ ಪಕ್ಷದ ಮುಖಂಡರಾದ ಪಕ್ಷದ ಬಿ. ಶ್ರೀಹರ್ಷ, ಬಸವರಾಜ ನಾಡಗೌಡ, ಜಿ. ಸತ್ಯನಾರಾಯಣ, ಅಯ್ಯನಗೌಡ ಆಯನೂರು, ನಾಗೇಶ ಹಂಚಿನಾಳ ಕ್ಯಾಂಪ, ವೆಂಕಟೇಶ್ ನಂಜಲದಿನ್ನಿ, ಉದಯ ಗೌಡ, ಚಂದ್ರಕಲಾ, ನದಿಮುಲ್ಲಾ, ಚಂದ್ರಶೇಖರ ಮೈಲಾರ, ಅಶೋಕ ಉಮಲೂಟಿ, ಶಿವಶಂಕರ ವಕೀಲ ಇನ್ನಿತರರು.