ಸದಾಶಿವ ವರದಿ ಜಾರಿಯಾದರೆ ಶೋಷಿತರಿಗೆ ಮಾರಕ

ಮುಳಬಾಗಿಲು ಸೆ.೨೪೫- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಹಲವಾರು ಲೋಪದೋಷಗಳಿಂದ ಕೂಡಿದೆ ವರದಿಯನ್ನು ಜಾರಿ ಮಾಡಿದರೆ ಪರಿಶಿಷ್ಠರಲ್ಲಿ ಅಂತಃಕಲಹಕ್ಕೆ ಕಾರಣವಾಗಿ ಸಾಮಾಜಿಕ ಆರೋಗ್ಯ ಕೆಡುವುದರ ಜೊತೆಗೆ ಶೋಷಿತ ಸಮುದಾಯಗಳ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ತಾಲೂಕು ಮೀಸಲಾತಿ ಸಂರಕ್ಷಣ ಒಕ್ಕೂಟದ ಅಧ್ಯಕ್ಷರೂ ಆದ ತಾ.ಪಂ. ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್ ಹೇಳಿದರು.
ತಾಲೂಕು ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಸದಾಶಿವ ಆಯೋಗದ ವರದಿ ವಿರುದ್ದ ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯ ನಂತರ ತಾಲೂಕು ಕಛೇರಿ ಮುಂದೆ ಮಾತನಾಡಿ ರಾಜ್ಯಾಧ್ಯಂತ ವರದಿ ವಿರುದ್ದ ಪ್ರತಿಭಟಿಸಿ ತಾಲೂಕು ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಗುತ್ತದೆ ಅದರಂತೆ ಮುಳಬಾಗಿಲುತಾಲೂಕಿನ ವಿವಿಧ ಪರಿಶಿಷ್ಠ ಜಾತಿಯ ಮುಖಂಡರು ಮತ್ತು ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವರದಿಯನ್ನು ಸರ್ಕಾರ ತಿರಸ್ಕರಿಸುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಹೇಳಿದರು.


ವರದಿ ಜಾರಿಯಿಂದ ಭೋವಿ, ಕೊರಚ, ಕೊರಮ, ಬಂಜಾರ, ಲಂಬಾಣಿ, ಹಂದಿಜೋಗಿ, ದೊಂಬರ, ಮುಂಡಾಲ, ಸೇರಿ ಎಸ್ಸಿ ಕ್ಯಾಟಗಿರಿಯಲ್ಲಿರುವ ೫೧ ಜಾತಿಗಳಿಗೆ ಅನ್ಯಾಯ ಮಾಡಲು ಹೊರಟಿರುವುದು ತೀವ್ರ ಖಂಡನೀಯ ಎಂದ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಸಂತ ಸೇವಾಲಾಲ್, ಭೋವಿ ಗುರುಪೀಠದ ಶ್ರೀಸಿದ್ದರಾಮೇಶ್ವರರ ವಿರುದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರವರು ಅವಹೇಳನವಾಗಿ ಮಾತನಾಡಿರುವುದು ಖಂಡನೀಯವಾಗಿದೆ ಕೇಂದ್ರ ಸರ್ಕಾರ ಇವರ ರಾಜಿನಾಮೆಯನ್ನು ಪಡೆಯಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಪದಕಾಷ್ಠಿ ವಿ.ವೆಂಕಟಮುನಿ ಮಾತನಾಡಿ ೧೯೩೫ರ ಸೆಂಟ್ರಲ್ ಆಕ್ಟ್‌ನಿಂದ ಊರ್ಜತವಾಗಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕಾಳಜಿಯಿಂದ ಶೋಷಿತ ಸಮುದಾಯಗಳನ್ನು ಎಸ್ಸಿ ಕ್ಯಾಟಗಿರಿಗೆ ಸೇರಿಸಿದ್ದು ಬಲಾಡ್ಯ ಶೋಷಿತ ಸಮುದಾಯಗಳ ಪ್ರಭಾವಿ ಮುಖಂಡರು ಹುನ್ನಾರ ನಡೆಸಿ ೫೧ ಶೋಷಿತ ಸಮುದಾಯಗಳನ್ನು ಹೊರ ಹಾಕಲು ಹೊರಟಿರುವುದು ಖಂಡನೀಯ ಇದರಿಂದ ಈ ಸಮಾಜಗಳು ಸರ್ವನಾಶಕ್ಕೆ ಮುಂದಾಗಿದ್ದಾರೆ ಇದನ್ನು ಒಗ್ಗಟ್ಟಿನಿಂದ ಎದುರಿಸಿ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾ.ಪಂ. ಮಾಜಿ ಸದಸ್ಯ ವಿ.ಮಾರಪ್ಪ, ಜೆಡಿಎಸ್ ಮಖಂಡ ಗ್ಯಾಸ್ ಶ್ರೀಧರ್‌ಮೂರ್ತಿ, ಭೋವಿ ಸಂಘದ ಅಧ್ಯಕ್ಷ ಜಿ.ಶಂಕರಪ್ಪ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಎನ್.ಶಿವಪ್ಪ, ಮಾತನಾಡಿ ಸದಾಶಿವ ಆಯೋಗ ವರದಿಯನ್ನು ಸರ್ಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ನಗರದ ನೇತಾಜಿ ಕ್ರೀಡಾಂಗಣದಿಂದ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಹಶೀಲ್ದಾರ್ ಕಛೇರಿಗೆ ತೆರಳಿ ಪ್ರತಿಭಟಿಸಿ ಉಪತಹಶೀಲ್ದಾರ್ ಕ್ರಾಂತಿವರ್ಮ ಮೂಲಕ ಸರ್ಕಾರಕ್ಕೆ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಿದರು.
ನಗರಸಭಾ ಸದಸ್ಯ ಜಿ.ನಾಗರಾಜ್, ಮುಖಂಡರಾದ ಭೋವಿ ಸಮುದಾಯ ಭವನದ ಅಧ್ಯಕ್ಷ ಹನುಮಪ್ಪ, ಮುಖಂಡರಾದ ವೈ.ಸೋಮಶೇಖರ್, ಭಾಲಕೃಷ್ಣ, ಚಂಗಲರಾಯಪ್ಪ, ರಾಜಣ್ಣ, ನಾಗೇಶ್ವರಿ, ಯಲ್ಲಪ್ಪ, ಬೈರಕೂರು ರಾಮಾಂಜಿ, ವಿ.ಆರ್.ಶಂಕರಪ್ಪ, ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆ ನೇತೃತ್ವವಹಿಸಿದ್ದರು.
೨೪ ಎಂ.ಬಿಎಲ್ ಪೋಟೋ.೦೬: ಮುಳಬಾಗಿಲಿನ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ತಾಲೂಕು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಸಿ.ವಿ.ಗೋಪಾಲ್ ಹಿರಿಯ ಮುಖಂಡ ಪದಕಾಷ್ಠಿ ವಿ.ವೆಂಕಟಮುನಿ, ಮತ್ತಿತರರ ಮುಖಂಡರು ಉಪತಹಶೀಲ್ದಾರ್ ಕ್ರಾಂತಿವರ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.