ಸದಾಶಿವ ಆಯೋಗ ವಿರೋಧಿಸಿ ಮನವಿ

ಕೋಲಾರ, ಸೆ.೨೪:ಭೋವಿ, ಕೊರಚ, ಕೊರಮ, ಲಂಬಾಣಿ ಇತರೆ ಸಮುದಾಯಗಳಿಗೆ ಸದಾಶಿವ ಆಯೋಗ ಮರಣಶಾಸನವಾಗಲಿದ್ದು, ಸದರಿ ಸದಾಶಿವ ಆಯೋಗದ ವಿರುದ್ಧ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಇಂದು ಆಯಾ ತಾಲೂಕಿನ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಲು ತೀರ್ಮಾನಿಸಿರುವುದಾಗಿ ಜಿಲ್ಲಾ ಭೋವಿ ಯುವ ವೇದಿಕೆ ಅಧ್ಯಕ್ಷ ಎಲ್.ಜಿ.ಮುನಿರಾಜ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸಭೆ ನಡೆಸಿ ಸದಾಶಿವ ಆಯೋಗ ಜಾರಿಯಾದರೆ ಆಗುವಂತಹ ಸಮಸ್ಯೆಗಳ ಕುರಿತು ಚರ್ಚಿಸಿದ ನಂತರ, ಸದಾಶಿವ ಆಯೋಗದ ವರದಿ ವಿರುದ್ಧ ಮನವಿ ಸಲ್ಲಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಭೋವಿ ಮುಖಂಡರಾದ ಶ್ರೀಕೃಷ್ಣ, ಮಂಗಮ್ಮ ಮುನಿಸ್ವಾಮಿ, ಮಾಲೂರು ಎಸ್.ವಿ ಲೋಕೇಶ್, ಹರಿಪ್ರಕಾಶ್ ಜಿ.ವೈ, ತಾಲೂಕು ಯುವ ಅಧ್ಯಕ್ಷ ದೊಡ್ಡವಲ್ಲಭಿ ಮಂಜುನಾಥ್, ಡಿ.ಎನ್ ದೇವರಾಜ್, ಬೈರಸಂದ್ರ ಪ್ರಕಾಶ್, ಚುಂಚದೇನಹಳ್ಳಿ ವೆಂಕಟೇಶ್, ಕಲ್ವಮಂಜಲಿ ಮುರಳಿ ಭಾಗವಹಿಸಿದ್ದರು.