ಸದಾಶಿವ ಆಯೋಗ ವಿರೋಧಿಸಿ ಕೂಡ್ಲಿಗಿ ಬಂಜಾರ ಸಮುದಾಯ ಪ್ರತಿಭಟನೆ, ಮನವಿ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 30 :- ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘ ಹಾಗೂ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ  ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ಜಾರಿಮಾಡದಂತೆ ವಿರೋಧಿಸಿ ಇಂದು ಮಧ್ಯಾಹ್ನ ಕೂಡ್ಲಿಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕೂಡ್ಲಿಗಿ  ತಹಶೀಲ್ದಾರರ ಮುಖಾಂತರ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.                                                                                        
ಬೋವಿ ಬಂಜಾರ ಕೊರಚ ಕೊರಮ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳಿಗೆ  ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಕಂಟಕವಾಗಿದ್ದು ಏಕಪಕ್ಷೀಯವಾಗಿರುವ ಈ ವರದಿ ಅಸಾಂವಿಧಾನಿಕ ಮತ್ತು ಅವಾಸ್ತವಿಕ ಅಂಶಗಳನ್ನು ಒಳಗೊಂಡಿವೆ, ಪರಿಶಿಷ್ಟ ಜಾತಿಯ ಸಹೋದರ ಸಮುದಾಯಗಳ ಮಧ್ಯೆ ದ್ವೇಷ, ಪ್ರಚೋಧನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ನಾರಾಯಣ ಸ್ವಾಮಿ ಮತ್ತು ರಾಜ್ಯ ಸಚಿವ ಗೋವಿಂದ ಕಾರಜೋಳರವರುಗಳನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಹೋರಾಟದ ಹೆಸರಿನಲ್ಲಿ ಬಂಜಾರ ಕುಲಗುರು ಶ್ರೀ ಸೇವಾಲಾಲ್ ಮತ್ತು ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೇಲಬೇಡಿಕೆ  ಈಡೇರಿಸುವಂತೆ ಕೂಡ್ಲಿಗಿ ತಹಸೀಲ್ದಾರ್ ಜಗದೀಶರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ಅಧ್ಯಕ್ಷರಾದ ಶಿವಕುಮಾರ್.ಕೆ ಉಪಾಧ್ಯಕ್ಷರಾದ ವಿನಾಯಕ ಕಾರ್ಯಾಧ್ಯಕ್ಷರಾದ ಮುರಳೀಧರನಾಯ್ಕ್ ಪ್ರಧಾನ ಕಾರ್ಯದರ್ಶಿಗಳಾದ :ಶಾರುಕಾಂತ.ಪಿ
ಸಂಘಟನಾ ಕಾರ್ಯದರ್ಶಿಗಳಾದ ಸುನೀಲ್.ಎಲ್.ಎಸ್ ಗೌರವಾಧ್ಯಕ್ಷರಾದ :ಪ್ರಕಾಶ್ ನಾಯ್ಕ್.ಎಲ್.ಎಂ ಮಾಧ್ಯಮ ಕಾರ್ಯದರ್ಶಿಯಾದ ವಾಗೀಶ್ ನಾಯ್ಕ್ ಜಿಲ್ಲಾ ಸಂಚಾಲಕ ಢಾಕ್ಯನಾಯ್ಕ್  ಹಾಗೂ ಬಂಜಾರ ಸಮುದಾಯದ ಮುಖಂಡರಾದ ಪವಿತ್ರಾಬಾಯಿ, ಬಾಸು ನಾಯ್ಕ್,  ಪೂರ್ಯಾನಾಯ್ಕ್, ಈಶ್ವರ್ ನಾಯ್ಕ್, ಕೊಟ್ಟೂರು ಸಮಿತಿ ಸದಸ್ಯರಾದ ದುರ್ಗಾನಾಯ್ಕ್, ಹರೀಶ್ ನಾಯ್ಕ್, ಪಾಂಡುನಾಯ್ಕ್, ಸುನೀಲ್ ನಾಯ್ಕ್
ಹಾಗೂ ಮತ್ತಿತರು ಇದ್ದರು