ಸದಾಶಿವ ಆಯೋಗ ವರದಿ ಹಿಂಪಡೆಯುವಂತೆ ಆಗ್ರಹ

ಜೇವರ್ಗಿ:e.2: ನ್ಯಾ.ಸದಾಶಿವ ಆಯೋಗ ವರದಿ ಸಂಪೂರ್ಣ ಅವಜ್ಞಾನಿಕತೆಯಿಂದ ಕೂಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವು ಇಲ್ಲ. ನ್ಯಾ. ಸದಾಶಿವ ಆಯೋಗದ ವರದಿ ಹಿಂಪಡೆಯಬೇಕು ಎಂದು ರವಿಂಚಂದ್ರ ಗುತ್ತೇದಾರ ಆಗ್ರಹಿಸಿದರು.

ಪಟ್ಟಣದ ರಿಲಾಯನ್ಸ್ ಬಂಕ್ ನಿಂದ ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನೆ ಮೇರವಣಿಗೆಯ ಮೂಲಕ ತಾಲೂಕ ದಂಡಾಧಿಕಾರಿಗಳ ಮುಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನುದ್ದೆಶಿಸಿ ರವಿಚಂದ್ರ ಗುತ್ತೆದಾರ ಮಾತನಾಡಿ ಕೊರವ, ಲಂಬಾಣಿ, ಭೋವಿ ಸಮಾಜ ಸೇರಿದಂತೆ ಇನ್ನು ಅನೇಕ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಸದಾಶಿವ ಆಯೋಗ ವರದಿ ಬಹಿರಂಗ ಚರ್ಚೆ ಮಾಡದೇ ಏಕಾಏಕಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ. ಕೇವಲ ಒಂದು ಕೋಣೆಯಲ್ಲಿ ಕುಳಿತು ಕೊಂಡು ವರದಿ ರಚಿಸಿದ್ದು ಎಲ್ಲರಿಗೂ ಜಗಬಾಹಿರು ಆಗಿರುವ ಸಂಗತಿ, ಇದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಈ ವರದಿ ಹಿಂಪಡೆಯದಿದ್ದಲ್ಲಿ ಎಲ್ಲಾ ತಾಂಡಗಳು ಮತ್ತು ಭೋವಿ ಸಮಾಜ ಕೊರವ ಸಮಾಜ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ.

ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳುಹಿಸಬಾರದು, ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಇಡಿ, ಯಥಾ ರೀತಿಯ ಮೀಸಲಾತಿಯನ್ನು ಹೆಚ್ಚಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ವರದಿಯನ್ನು ಕೂಡಲೇ ವಾಪಸ ಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದರು.

ಈ ಸಂದರ್ಭದಲ್ಲಿ ತುಳುಜಾರಾ ರಾಠೋಡ್, ತಿಪ್ಪಣ್ಣ ರಾಠೋಡ್, ಶರಣು ಗುತ್ತೇದಾರ, ರವಿಚಂದ್ರ ಗುತ್ತೆದಾರ, ಭೀಮಾಶಂಕರ ಕುರಡೆಕರ್ ಯಲಗೋಡ್, ನಿಂಗಣ್ಣ ನೆಲೋಗಿ, ರಮೇಶ್ ರಾಠೋಡ್, ಕೃಷ್ಣ ರಾಠೋಡ್, ಗುಂಡಪ್ಪ ನಾಯಕಲ್, ಗುಂಡು ಗುತ್ತೇದಾರ್, ಧನರಾಜ ರಾಠೋಡ್, ಲಕ್ಷ್ಮಣ್ ಪವರ್, ಮಲ್ಲಿಕಾರ್ಜುನ್ ಬಂಜತ್ರಿ, ರವಿ ಪಾಟೀಲ್ ಜನಿವಾರ, ಶರಣು ಪಿ. ಯಲಗೋಡ್, ಶಾಂತು ಶಖಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.