ಸದಾಶಿವ ಆಯೋಗ ವರದಿ ಶಿಫಾರಸ್ಸು:ಸ್ವಾಗತಾರ್ಹ

ಕೋಲಾರ,ಮೇ.೬:ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ರಾಜ್ಯ ಬಿಜೆಪಿ ಸರ್ಕಾರ ಅಂಗೀಕರಿಸಿ ಜಾರಿಗಾಗಿ, ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸ್ವಾಗತಿಸಿ ಇಡೀ ರಾಜ್ಯ ಮಾದಿಗ ಸಮುದಾಯ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಲು ಬೆಂಬಲ ನೀಡುತ್ತಿರುವುದಾಗಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿರುವ ಅವರು, ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸುಮಾರು ೩೦ ವರ್ಷಗಳಿಂದ ಒಳ ಮೀಸಲಾತಿಯನ್ನು ಪಡೆಯಲು ಅನೇಕ ಹೋರಾಟಗಳನ್ನು, ಚಳುವಳಿಗಳನ್ನು ಮಾಡಿಕೊಂಡು ಬಂದಿದ್ದರಿಂದ ಅದರ ಪ್ರತಿಫಲ ಬಿಜೆಪಿ ಸರ್ಕಾರ ಅದಕ್ಕೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮತ್ತು ಜೆ.ಡಿ.ಎಸ್ ಸರ್ಕಾರಗಳು ಸುಳ್ಳುಪೊಳ್ಳು ಹೇಳಿಕೆಗಳನ್ನು ಕೊಟ್ಟು ಯಾಮಾರಿಸಿ ನಮ್ಮ ಸಮುದಾಯಗಳನ್ನು ಓಟ್‌ಬ್ಯಾಂಕ್ ಮಾಡಿಕೊಂಡು ಸರ್ಕರಗಳನ್ನು ರಚನೆ ಮಾಡಿ ಆಡಳಿತವನ್ನು ನಡೆಸಿದವು. ದಲಿತರ ಬಗ್ಗೆ ಆಗಲೀ ಹಿಂದುಳಿದವರ ಬಗ್ಗೆ ಆಗಲೀ ಸಾಮಾಜಿಕ ನ್ಯಾಯವನ್ನು ನೀಡಲಿಲ್ಲ. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬದ್ಧವಾಗಿ ಕೊಟ್ಟಿರು ವಂತಹ ಮೀಸಲಾತಿಯಲ್ಲಿ ಯಾವುದೇ ಜೆ.ಡಿ.ಎಸ್, ಕಾಂಗ್ರೆಸ್ ರಾಜ್ಯ ಸರ್ಕಾರಗಳು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ಗಳನ್ನು ನಡೆಸಿದ್ದವು ಮತ್ತು ಪಾರದರ್ಶಕ ವಾಗಿ ನ್ಯಾಯವನ್ನು ಕೊಟ್ಟಿಲ್ಲ.
ಕೋಲಾರ ಜಿಲ್ಲೆಯ ಎಲ್ಲಾ ಮಾದಿಗ ಬಂಧುಗಳು ಬಿಜೆಪಿ ಪಕ್ಷಕ್ಕೆ ತಮ್ಮ ಮತ ನೀಡುವ ಮೂಲಕ ತಮ್ಮ ಋಣವನ್ನು ತೀರಿಸಿಕೊಳ್ಳಬೇಕೆಂದು ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಹಾರೋಹಳ್ಳಿ ವೆಂಕಟೇಶ್, ಸಾಹುಕಾರ್ ಇನ್ನಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.