ಸದಾಶಿವ ಆಯೋಗ ವರದಿ ಜಾರಿ ಹೋರಾಟಕ್ಕೆ ಬೆಂಬಲ; ಎಸ್ ರಾಮಪ್ಪ

ಹರಿಹರ ಜ.6; ಹಿಂದುಳಿದ ವರ್ಗ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಆಗುವವರೆಗೂ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಕ್ಷೇತ್ರದ ಶಾಸಕ ಎಸ್ ರಾಮಪ್ಪ ಹೇಳಿದರು.ಮಾದಿಗ ಮೀಸಲಾತಿ ಹೋರಾಟ ಸಮಿತಿಯ  ಆಶ್ರಯದಲ್ಲಿ ಬಸ್ ನಿಲ್ದಾಣ ಸಮೀಪವಿರುವ ಗುರುಭವನದಲ್ಲಿ ಒಳ ಮೀಸಲಾತಿ  ಜಾರಿಗಾಗಿ ಮನವಿ ಕಟ್ಟಡ ಕಾರ್ಮಿಕರ ಕಾರ್ಡ್ ಸಮೃದ್ದಿ ಪಾಸ್ ಬುಕ್ ವಿತರಣೆ ಸಮಾರಂಭದಲ್ಲಿ  ಮಾತನಾಡಿ ಸುಮಾರು ವರ್ಷಗಳಿಂದ ಸದಾಶಿವ ಆಯೋಗ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಧರಣಿಗಳನ್ನು ಮಾಡುತ್ತಾ ಬಂದಿರುವ ಸಮಾಜಕ್ಕೆ ಒಳಮೀಸಲಾತಿ ಜಾರಿಯಾಗಬೇಕು ಆರ್ಥಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಪರಿಶಿಷ್ಟ ಸಮಾಜವು ಮುಖ್ಯವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ ಸದಾ ನಿಮ್ಮ ಒಳ ಮೀಸಲಾತಿ ವರದಿ ಜಾರಿಯಾಗುವವರೆಗೂ ನಿಮ್ಮೊಂದಿಗೆ ಹೋರಾಟಕ್ಕೆ ಕೈಜೋಡಿಸುತ್ತೇನೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಚುನಾಯಿತ ಅಭ್ಯರ್ಥಿಗಳ ಸನ್ಮಾನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಬಡ ಮಕ್ಕಳಿಗೆ ನೋಟ್ ಬುಕ್ಕು ಪೆನ್ನು ಬ್ಯಾಗ್ ವಿತರಣೆ ವಿದ್ಯಾರ್ಥಿಗಳಿಗೆ ನೀಡುವ ಜತೆಗೆ ಕಟ್ಟಡ ಕಾರ್ಮಿಕರಿಗೆಕಾರ್ಡ್ ಸಮೃದ್ದಿ ಪಾಸ್ ಬುಕ್ ವಿತರಣೆ ನಡೆಯಿತು ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀ  ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾರಾಯಣಸ್ವಾಮಿ ಮಾಜಿ ಸಚಿವರು ಮತ್ತು ಸಂಸತ್ ಸದಸ್ಯರು ಚಿತ್ರದುರ್ಗ. ಉಪ ಸಭಾಪತಿ ರಾಜ್ಯಸಭಾ ಸದಸ್ಯರು ಡಾಕ್ಟರ್ ಎಲ್ ಹನುಮಂತಯ್ಯ .ಮಾಜಿ ಶಾಸಕರುಗಳಾದ ಬಿ ಪಿ ಹರೀಶ್. . ಹಾಗೂ ಎಂ ಹನುಮಂತಪ್ಪ. ಕೆ ಎಸ್ ಬಸವರಾಜ್. ನಿವೃತ್ತ ಕೆಎಎಸ್ ಅಧಿಕಾರಿ ಪುರುಷೋತ್ತಮ್ ಎ ಹನುಮಂತಪ್ಪ ಏಕೆ ನಾಗೇಂದ್ರಪ್ಪ. ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ .ನಗರಸಭಾ ಸದಸ್ಯರುಗಳಾದ ರಜನಿಕಾಂತ್ ಎನ್  .ಆಟೋ ಹನುಮಂತಪ್ಪ .ಹಾಗೂ ಎಂ ಎಸ್ ಆನಂದ್ ಕುಮಾರ್ ಮಾಜಿ ದೂಡ ಸದಸ್ಯ ಎಚ್ ಎಂ ನಿಜಗುಣ, ಭೂಮಿಷ, ಮಂಜುನಾಥ್ .ಶ್ರೀನಿವಾಸ್. ಶ್ರೀಕಾಂತ್ ,ವೈ ಬಿ ಪ್ರಭಾಕರ್. ಉಪಾಧ್ಯಕ್ಷ ಕೇಶವ ಕಂಚಿಕೇರಿ. ಎಚ್ ಶಿವಪ್ಪ. ಶಿವರಾಮ್ ಕೆ .ನಿಂಗರಾಜ್ ಸಿ .  ರಾಮಪ್ಪ. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ನಗರಸಭೆ  ಹಾಲಿ ಮಾಜಿ ಸದಸ್ಯರು ಗಳು ಸಮಾಜದ ಮುಖಂಡರುಗಳು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು