ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ಮಾದಿಗ ದಂಡೋರ ಒತ್ತಾಯ

ಸುರಪುರ:ಸೆ.15- ದಲಿತರಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕೆಂದು ಎ.ಜೆ ಸದಾಶಿವ ಅವರು ನೀಡಿರುವ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ನಗರದ ತಹಶಿಲ್ದಾರರ ಕಛೇರಿ ಮುಂದೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ ದುರ್ಗಪ್ಪ ಬಡಿಗೇರ ಮಾತನಾಡಿ ರಾಜ್ಯದಲ್ಲಿ ಮಾದಿಗ ಸಮುದಾಯ ಸಂಖ್ಯಾ ಬಲವನ್ನು ಗುರುತಿಸಿ ನ್ಯಾಯಮೂರ್ತಿ ಎ.ಜೆ ಸದಾಶಿವ ಅವರು ವರದಿ ರಚಿಸಿದ್ದು ಆ ವರದಿಯನ್ನು ಜಾರಿಗೊಳಿಸಲು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನಿಯ ಆದಷ್ಟು ಬೇಗ ವರದಿ ಜಾರಿಗೊಳಿಸಬೇಕು ಎಂದರು.

ನ್ಯಾಯಲಯವೂ ಕೂಡಾ ಈ ವರದಿಯನ್ನು ಜಾರಿಗೊಳಿಸಲು ತಿಳಿಸಿದೆ ಆದರೆ ಸರಕಾರ ಮಾತ್ರ ಜಾರಿಗೊಳಿಸುತ್ತಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾದಿಗ ಸಮುದಾಯಕ್ಕೆ ಸದಾಶಿವ ಆಯೋಗದ ವರದಿ ಜಾರಿ ಮಾಡುವ ಮೂಲಕ ಕಾನೂನು ಮೂಲಕ ಸಿಗಬೇಕಾದ ಮೀಸಲಾತಿ ಕಲ್ಪಿಸುವಂತೆ ಮಾದಿಗ ದಂಡೋರ ಮುಖಂಡರು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಇನ್ನೂ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್ 2 ತಹಶಿಲ್ದಾರರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಭೀಮಾಶಂಕರ ಬಿಲ್ಲವ್, ನ್ಯಾಯವಾದಿ ಯಲ್ಲಪ್ಪ, ಹಣಮಂತ ಹುಲಕಲ್, ಪರಶುರಾಮ, ಮೌನೇಶ ಸೇರಿದಂತೆ ಇತರರಿದ್ದರು.