ಸದಾಶಿವ ಆಯೋಗ ವರದಿಯನ್ನು ಯತಾವತ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯ

ವಿಜಯಪುರ:ನ.15: ಜಿಲ್ಲಾ ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೊಷ್ಠಿ ಹಮ್ಮಿಕೊಳ್ಳಲಾಗಿತ್ತು.
ಮಹೇಶ ಬಿ. ಅಗರಖೇಡ ವಿಭಾಗೀಯ ಅಧ್ಯಕ್ಷರು ಬೆಳಗಾಂವ ಮಾತನಾಡಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಏತಾವತ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ದಿ. 13-12-2021 ಬೆಳಗಾಂವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಬೈಕ್ ರ್ಯಾಲಿ ಮೂಲಕ ಮನವಿ ಸಲ್ಲಿಸಿ ಬೆಳಗಾಂವ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.
ಕರ್ನಾಟಕ ರಾಜ್ಯ ಮಾದಿಗ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ ಎಸ್. ರವರ ಆದೇಶದ ಮೇರೆಗೆ ಬೆಳಗಾಂವಿ ವಿಭಾಗೀಯ ಅಧ್ಯಕ್ಷರಾದ ಮಹೇಶ ಭೀಮಪ್ಪ ಅಗರಖೇಢ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರನ್ನು ಹೊಂದಿರುವ ಮಾದಿಗ ಸಮಾಜ ಮತ್ತು ಚಲವಾದಿ ಸಮಾಜದ ಬಹುಸಂಖ್ಯಾತರಿಂದ ಕಳೆದ 30 ವರ್ಷಗಳ ಬೇಡಿಕೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ಬೆಳಗಾವಿಯ ಸುವರ್ಣ ಸೌಧದಲ್ಲಿ ದಿನಾಂಕ 13-12-2021 ರಿಂದ ನಡೆಯುತ್ತಿರುವ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಎತಾವತ್ತಾಗಿ ಅಂಗೀರಕಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲು ಮತ್ತು ಧರಣಿ ಸತ್ಯಾಗ್ರಹ ಮಾಡಲು ನಿರ್ದರಿಸಲಾಗಿದೆ.
ಈ ಸತ್ಯಾಗ್ರಹಕ್ಕೆ ಕಲಬುರಗಿ ವಿಭಾಗೀಯ ಅಧ್ಯಕ್ಷರಾದ ಚಂದ್ರಕಾಂತ ಕೆ. ನಾಟೀಕಾರ ಇವರ ನೇತೃತ್ವದಲ್ಲಿ ಬೀದರ, ಯಾದಗಿರಿ, ಕಲಬುರಗಿ, ಮತ್ತು ಕಲಬುರಗಿ ವಿಭಾಗದ ಇತರೆ ಜಿಲ್ಲೆಗಳಿಂದ ಸುಮಾರು 5 ಸಾವಿರ ಜನರು ಬೈಕ್ ರ್ಯಾಲಿ ಮೂಲಕ ದಿ. 10-12-2021 ರಂದು ಹೊರಟು ದೇವರ ಹಿಪ್ಪರಗಿ ಮಾರ್ಗವಾಗಿ ವಿಜಯಪುರನ್ನು ತಲಪುವರು. ಅದೇ ದಿನ ವಿಜಯಪುರದ ಬಾಲಕರ ಸರಕಾರಿ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿ ದಿನಾಂಕ 11-12-2021 ರಂದು ಬೆಳಿಗ್ಗೆ 11-00 ಗಂಟೆಗೆ ಅಲ್ಲಿಂದ ಹೊರಟು ಜಮಖಂಡಿ ಮಾರ್ಗವಾಗಿ ಮಧೋಳನ್ನು ತಲುಪುವುದು. ಮತ್ತು ರಾತ್ರಿ ಬಾಲಕರ ಸರಕಾರಿ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿ ದಿ. 12-12-2021 ರಂದು ಬೆಳಿಗ್ಗೆ 11-00 ಗಂಟೆಗೆ ಮುಧೋಳದಿಂದ ಹೊರಟು ಲೋಕಾಪೂರ ಯರಗಟ್ಟಿ ಮಾರ್ಗವಾಗಿ ಬೆಳಗಾಂವ ತಲುಪಿ ಬಾಲಕರ ಸರಕಾರಿ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿ ದಿ. 13-12-2021 ರಂದು ಬೆಳಗಾವಿಯ ಸುವರ್ಣ ಸೌಧ ತಲುಪಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ ಅವರಿಗೆ ನಮ್ಮ ಮನವಿಯನ್ನು ಸಲ್ಲಿಸುವುದು. ಮತ್ತು ಈ ಮನವಿಯನ್ನು ಸದನದಲ್ಲಿ ಮಂಡಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಸುವರ್ಣಾ ಸೌಧದ ಮುಂದೆ ಧರಣಿ ಸತ್ಯಾಗ್ರಹವನ್ನು ನಡೆಸುವ ಸಂಗತಿಯನ್ನು ಈ ಪತ್ರಿಕಾ ಗೋಷ್ಠಿ ಮೂಲಕ ತಮಗೆ ತಿಳಿಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ಬಿ. ನಾರಾಯಣಪೂರ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬೆಳಗಾವಿ, ಶೇಖರ ಹೊಸಮನಿ, ಇಂಡಿ ತಾಲೂಕಾ ಅಧ್ಯಕ್ಷರು, ತೆಗ್ಗಿಹಳ್ಲಿ, ಮಹಾಂತೇಶ ತಮದಡ್ಡಿ ಮುದ್ದೇಬಿಹಾಳ ತಾಲೂಕಾಧ್ಯಕ್ಷರು, ಜ್ಞಾನೇಶ ಪೂಜಾರಿ, ಕುಮಾರ ಹಳಕಲ್ಲ, ಗಣೇಶ ಚಿಕ್ಕೋಡಿ ಬಾಗಲಕೋಟ ಜಿಲ್ಲಾಧ್ಯಕ್ಷರು, ರಾಮ ಹೂಗಾರ ಕರ್ನಾಟಕ ರಕ್ಷಣಾ ವೇದಿಕೆ ವಲಯ ಘಟಕ ಅಧ್ಯಕ್ಷರು ಅಗರಖೇಡ ಮುಂತಾದವರು ಉಪಸ್ಥಿತರಿದ್ದರು.