ರಾಯಚೂರು, ಮಾ.೨೫- ಪರಿಶಿಷ್ಟ ಜಾತಿ ಸಮುದಾಯಕ್ಕೆ ರಾಜ್ಯ ಸರಕಾರ ಭರ್ಜರಿ ಗಿಫ್ಟ್ ನೀಡಿದ್ದು,ಅವಕಾಶ ವಂಚಿತ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದ್ದಕ್ಕಾಗಿ ಮಾದಿಗ ಸಮಾಜದ ಮುಖಂಡ ಎಮ್ ಸುಭಾಷ್ ಹರ್ಷ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಳೆದ ೨೬ ವರ್ಷಗಳಿಂದ ನಡೆದ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಈ ನಿರ್ಧಾರ ಮಾಡಿರುವ ಮುಖ್ಯಮಂತ್ರಿಗಳು ಅಭಿನಂದನಾರ್ಹರು ಎಂದ ಅವರು, ಈ ಹೋರಾಟದಲ್ಲಿ ಸಂತೆಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಸವನ ಬಾಗೇವಾಡಿಯ ೮ ಜನ ಮಾದಿಗ ಸಮುದಾಯದ ಹುತಾತ್ಮರಿಗೆ ಕರ್ನಾಟಕದ ಸಮಸ್ತ ಮಾದಿಕರು ಇವರಿಗೆ ಋಣಿಯಾಗಿದ್ದೇವೆ. ಒಳ ಮೀಸಲಾತಿ ಪರವಾಗಿ ಶೋಷಿತ ಸಮುದಾಯದ ಧ್ವನಿಯನ್ನು ಗುರುತಿಸುವಲ್ಲಿ ಶ್ರೀ ಹಿರಿಯ ಪೇಜಾವರ ಮಠದ ಶ್ರೀ ಪಾದರು ಹಾಗೆ ಇನ್ನೂ ಅನೇಕ ಧಾರ್ಮಿಕ ಹಿರಿಯರು ಕೂಡ ನಮ್ಮ ಸಮುದಾಯದ ಬೆಂಬಲಕ್ಕೆ ನಿಂತಿದ್ದು ಕೂಡ ಹೋರಾಟಕ್ಕೆ ಜಯ ಲಭಿಸಿದ್ದು ಪ್ರಮುಖ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಚಾಲ ಭೀಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.