ಸದಾಶಿವ ಆಯೋಗ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬಾಲಿಶ

ಮುದ್ದೇಬಿಹಾಳ:ನ.4: ಸದಾಶಿವ ಆಯೋಗವನ್ನು ಬಿಜೆಪಿ ಸರ್ಕಾರ ಜಾರಿಗೋಳಿಸುತ್ತದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರ ಹೇಳಿಕೆ ಬಾಲಿಶದಿಂದ ಕುಡಿದೆ. ಅವೈಜ್ಞಾನಿಕವಾಗಿರುವ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರುವದರಿಂದ ಪರಿಶಿಷ್ಟ ಜಾತಿಯವರಲ್ಲಿಯೆ ಅತಿ ಹಿಂದುಳಿದ ಜನಾಂಗವಾಗಿರುವ ಲಂಬಾಣಿ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಾಂಗ್ರೇಸ್ ಮುಖಂಡ ಲಕ್ಷ್ಮಣ ಚವ್ಹಾಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬಂಜಾರ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶಿರಾ ಉಪಚುನಾವಣೆ ಪ್ರಚಾರದ ಸಮಯದಲ್ಲಿ ಜಾತಿ,ಜಾತಿಗಳ ಮದ್ಯ ಒಡಕು ಮೂಡಿಸುವ ದೃಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ್ದಾರೆ ವಿನಹ ಇದರಲ್ಲಿ ಯಾವುದೆ ಹುಳುಕು ಇಲ್ಲ ಇನ್ನು ಮುಂದೆ ಬಿಜೆಪಿ ರಾಜ್ಯಾಧ್ಯಕ್ಷರು ಇದೆ ರೀತಿ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ದ ಬೃಹತ್ ಪ್ರತಿಭಟನೆ ಮಾಡಲಾಗುವದು. ಜಾತಿ,ಜಾತಿಗಳ ಮದ್ಯ ವಿಷ ಬಿತ್ತುವ ಕೆಲಸ ಬಿಜೆಪಿ ಪಕ್ಷ ಮೋದಲಿನಿಂದಲು ಮಾಡಿಕೋಂಡು ಬರುತ್ತಿದೆ ಎಂದು ಅವರು ಆರೋಪಿಸಿದರು.
ಬಂಜಾರ ಸಮಾಜದ ಹಿರಿಯರಾದ ಎಂ.ಆರ್.ನಾಯಕ ಮಾತನಾಡಿ ಲಂಬಾಣಿ ಜನಾಂಗದವರು ಇಂದಿಗೂ ಕೂಲಿ, ನಾಲಿ ಮಾಡುತ್ತಾ ಹೋರ ರಾಜ್ಯಗಳಿಗೆ ದುಡಿಯಲು ಹೋಗುತ್ತಾರೆ. ಮೀಸಲಾತಿಯಿಂದ ವಂಚಿತವಾದ ಲಂಬಾಣಿ ಜನಾಂಗವನ್ನು ಸದಾಶಿವ ಆಯೋಗ ವರದಿ ಅನ್ವಯ ಮೀಸಲಾತಿ ಕಡಿಮೆಗೋಳಿಸಿದರೆ ಸಮಾಜದ ಜನ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಬೆಕಾಗುತ್ತದೆ ಬಿಜೆಪಿ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಯಾವುದೆ ಸರ್ಕಾರವಿರಲಿ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಬಾರದು ಎಂದು ಅವರು ಹೇಳಿದರು.
ಈ ಸಮಯದಲ್ಲಿ ಬಂಜಾರಾ ಸಮುದಾಯದ ನಾನಪ್ಪ ನಾಯಕ, ಥಾವರಪ್ಪ ಜಾಧವ, ವಾಮನರಾವ್ ಲಮಾಣಿ, ನೀಲಪ್ಪ ನಾಯಕ, ಚಂದ್ರಕಾಂತ ಮೇಲ್ಮನಿ, ಬಾಬು ಲಮಾಣಿ, ವಾಲಪ್ಪ ಲಮಾಣಿ, ಲೋಕನಾಥ ಲಮಾಣಿ ಮತ್ತಿತರರು ಇದ್ದರು.