ಸದಾಶಿವ ಆಯೋಗದ ವರದಿ  ವಿರೋಧಿಸಿ ಜ.೧೦ರಂದು ಬೆಂಗಳೂರು ಚಲೋ


ಸಂಜೆವಾಣಿ ವಾರ್ತೆ
ಕುಕನೂರು, ಜು.05:  ನ್ಯಾ.ಮೂ. ಸದಾಶಿವ ಆಯೋಗದ ವರದಿ ಹಿನ್ನಲೆ ಸಾಮಾಜಿಕ ಸಾಮರಸ್ಯ ಕೆಡಿಸಲು ಸರ್ಕಾರ ಪ್ರಯತ್ನಿಸಬಾರದು ಎಂದು ಗೋರ ಸೇನಾ ಸಂಘಟನೆ ರಾಜ್ಯ ಕಾಯ೯ದಶಿ೯ ಸುರೇಶ್ ಬಳೂ ಟಗಿ ಹೇಳಿದರೂ.ಅವರು ಗುರುವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು.
ಒಳ ಮೀಸಲು ಜಾರಿಗೆ ಗೋರ ಸೇನಾ ( ಬಂಜಾರ ಸೇನೆ ),ಭೋವಿ ಹಾಗೂ ಕೊರಮ. ಕೊರಚ ಸಮಾಜ ಸದಾ ವಿರೋಧ ವಿದೆ.
ಒಳ ಮೀಸಲಾತಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಮತ್ತು ಇತರ ಜಾತಿಗಳಿಗೆ ಅನ್ಯಾಯವಾಗುತ್ತದೆ.
ಸರಕಾರ ಒಂದು ಕಡೆ ತರುತ್ತೇವೆ, ಇನ್ನೊಮ್ಮೆ ಜಾರಿಗೆ ತರಲ್ಲ ಎನ್ನುವ ಸರ್ಕಾರಸರ್ಕಾರದ ದ್ವಿಮುಖ ನೀತಿಗೆ ವಿರೋಧ ಇದೆ.ಸದಾಶಿವ ಆಯೋಗ ಜಾರಿಗೆ ವಿರೋಧಿಸಿ ಜನೆವರಿ 10 ರಂದು ಬೆಂಗಳೂರು ನಲ್ಲಿ ಬ್ರಹತ್ ಪ್ರತಿಭಟನೆ ಮಾಡುತ್ತೇವೆ.
ಸರ್ಕಾರ ಜಾತಿ ಜಾತಿ ಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡಬಾರದು. ತಾಂಡಾ, ಕೇರಿಗಳು, ಪರಿಶೀಷ್ಟ ಕಾಲೋನಿಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಲಿಅದನ್ನು ಬಿಟ್ಟು ನ್ಯಾಯಮೂರ್ತಿ ಸದಾಶಿವ ಆಯೋಗದ ಹೆಸರಲ್ಲಿ ರಾಜ್ಯ ಸರ್ಕಾರ ಜಗಳ ಹಚ್ಚುವ ಕೆಲಸ ಮಾಡಬಾರದು ಬಂಜಾರ ಸೇನಾ ರಾಜ್ಯ ಕಾರ್ಯದರ್ಶಿ ಸುರೇಶ್ ಬಳೂಟಗಿ ಒತ್ತಾಯಿಸಿದರು . ಮುಖಂಡರಾದ ಕುಮಾರ್ ಬಳ ಗೇ ರಿ, ಅಮರೇಶ್ ಮನ್ನಪೂರ್,ವಿಶ್ವನಾಥ್ ಕುಣಕೆರಿ ಈ ಸಂದಭ ೯ ಹಾಜರಿದ್ದರು.