ಸದಾಶಿವ ಆಯೋಗದ ವರದಿ ವಿರೋಧಿಸಿ
ಜ 10 ಪರಿಶಿಷ್ಟ ಜಾತಿಗಳ ಸಂಕಲ್ಪ ಸಮಾವೇಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜ,6- ನ್ಯಾ. ಎ.ಜೆ. ಸದಾಸಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು, ಕೂಡಲೇ ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕೆಂದು ಮತ್ತು ಆಯೋಗದ ವರದಿ ವಿರೋಧಿಸಿ   ಜ.10 ರಂದು ಬೆಂಗಳೂರಿನನಲ್ಲಿ ನಮ್ಮ‌ಗೋರ್ ಸೇನಾ ಕರ್ನಾಟಕದಿಂದ ಪ್ರತಿಭಟನೆ ಹಮ್ಮಿಕೊಂಡಿದೆಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋಪಿ ನಾಯ್ಕ್ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ನ್ಯಾ. ಎ.ಜೆ. ಸದಾಶಿದ ಆಯೋಗದ ವರದಿಯ ದೃಡಿಕೃತ ಪ್ರತಿಯನ್ನು 101 ಪರಿಶಿಷ್ಟ ಜಾತಿಗಳಿಗೆ, ಸಂಘಟನೆಗಳು ಮತ್ತು ಆಸಕ್ತರಿಗೆ ನೀಡಬೇಕು, ಬಾವಿಕ ಸಮುದಾಯಗಳ ಅಭಿಪ್ರಾಯ, ಲಿಖಿತ ಆಕ್ಷೇಪಣೆ, ತಕರಾರುಗಳನ್ನು ಸ್ವೀಕರಿಸಿ ವಿಚಾರಣೆಗೆ ಆಹ್ವಾನಿಸಬೇಕು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗಿಕರಣದ ಕುರಿತು ಪರಿಶೀಲಿಸಿ ಸೂಕ್ತ ಶಿಪಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಉಪಸಮಿತಿ ರಚನೆಯಾಗಿರುವುದು ಸ್ವಾಗತಾರ್ಹ. ಈ ಉಪಸಮಿತಿಯು ಪರಿಶಿಷ್ಟರ ಶೈಕ್ಷಣಿಕ, ಔದ್ಯೋಗಿಕ ಮತ್ತಿತರ ಸ್ಥಿತಿಗತಿಗಳ ಅಧ್ಯಯನ ಮಾಡಲು ಅಗತ್ಯ ಪ್ರಸ್ತಾವನೆ ರೂಪಿಸಬೇಕು. ಪರಿಶಿಷ್ಟರ 101 ಜಾತಿಗಳ ಮನೆ ಮನೆ ಸಮೀಕ್ಷೆ, ಇಲಾಖಾವಾರು ಮಾಹಿತಿ, ಅವಲೋಕನದ ಮೂಲಕ ವಸ್ತುನಿಷ್ಠ ಅಧ್ಯಯನಕ್ಕೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು, ಆ ಮೂಲಕ ಸಮಾಜದಲ್ಲಿ ನಿರ್ಲಕ್ಷಿತ ಜಾತಿ ಮತ್ತು ವ್ಯಕ್ತಿಗಳಿಗೆ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶಗಳು ಸಿಗುವಂತಾಗಲು ಅಗತ್ಯ ವಿಫಾರಸ್ಸುಗಳನ್ನು ಮಾಡಬೇಕು.  ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಯ ವಾಸ್ತವ ಆರಿಯುವಂತಾಗಲು ಜಾತಿವಾರು ಜನಗಣತಿ ಮಾಡಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ  ಕಾಂತರಾಜುರವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪ್ರಕಟಿಸಬೇಕು, ಆಮೂಲಕ ಪರಿಶಿಷ್ಟ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಆಧರಿಸಿ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವವರ ಪ್ರಭಲ ಜಾತಿಗಳ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ನಕಲಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು ಚಲೋ ನಡೆದಿದೆ.
ಜ 10 ರಂದು ಪರಿಶಿಷ್ಟ ಜಾತಿಗಳ ಸಂಕಲ್ಪ ಸಮಾವೇಶ ನಡೆಸುತ್ತಿದೆ. ಜಿಲ್ಲೆಯಿಂದ ಸಾವಿರಾರು ಜನರು ಈ ಸಮಾವೇಶಕ್ಕೆ ತೆರಳಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸೇನೆಯ ಗೌರವ ಅಧ್ಯಕ್ಷ ಸ್ವಾಮಿ ನಾಯ್ಕ್, ಕಾರ್ಯದರ್ಶಿ ಚಂದ್ರನಾಯ್ಕ್, ಕೃಷ್ಣಾ ನಾಯ್ಕ್, ಸಮನತೋಷ್ ನಾಯ್ಕ್, ಚರಣ್ ರಾಜ್, ಬಸವರಾಜ್, ಚಂದ್ರನಾಯ್ಕ್ ಮೊದಲಾದವರು  ಇದ್ದರು.