ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಜಾಗೃತಿ ಜಾಥಾ

ಬೀದರ್,ನ.4-ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಜಾಗೃತಿ ಜಾಥಾ ಒಂದು ವೇಳೆ ಜಾರಿ ಆಗದೇ ಇದಲ್ಲಿ ರಕ್ತ ಪತ್ರ ಚಳುವಳಿ ನಡೆಸಲಾಗುವುದೆಂದು ಯುವ ನಾಯಕ ಬಂಟಿ ದರ್ಬಾರೇರವರು ಘೋಷಿಸಿದರು.
ಆದಿ ಜಾ0ಬವ ಸಂಘ ತಾಲೂಕ ಘಟಕ ಔರಾದ(ಬಾ) ವತಿಯಿಂದ ಬಂಟಿ ದರ್ಬಾರೇರವರ ನೇತೃತ್ವದಲ್ಲಿ ತಾಲೂಕಿನ ಕೌಠ(ಬಿ ),ಲಾಧಾ ಧೂಪತಮಾಹಾಗಾ0ವ, ಶೆ0ಬೆಳ್ಳಿ, ಸಂತಪುರ ಗ್ರಾಮಗಳಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಸಮಾಜ ಜಾಗೃತಿ ಹಾಗೂ ತಮಟೆ (ಹಲಗೆ) ಚಳುವಳಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯಧ್ಯಕ್ಷರಾದ ಹಣಮಂತ ಸೂರ್ಯವಂಶಿ, ವೆಂಕಟ ಜಾಧವ,ದಯಾನಂದ ಸರಕುರ, ಸಮಾಧಾನ, ಪ್ರಶಾಂತ್ ದರ್ಬಾರೇ,ಜಗನಾಥ್ ಕೌಠಾ, ಅಶೋಕ್ ದಯಾಸಾಗರ್ ಕೌಠಾ,ಅಮಿತ ಕೌಠಾ, ಧನರಾಜ್ ಲಾಧಾ, ಸುನಿಲ್ ಲಾಧಾ, ರವಿ ಲಾಧಾ, ಬಾಬು ಲಾಧಾ, ಅನಿಲ್, ಭೀಮಣ್ಣ ಸಂತಪುರ, ಯೆಶಪ್ಪ ಶೇಂಬಳ್ಳಿ , ರಾಬರ್ಟ, ಸಿದ್ರಾಮ ಮಡಕೆ, ಸಂತಪುರ, ಉಪಸ್ಥಿತರಿದ್ದರು.