ಸದಾಶಿವ ಆಯೋಗದ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವೆ

ಬೀದರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ವಿಷಯವಾಗಿ ಒಳ ಮೀಸಲಾತಿಯ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.

ಖಾಶೆಂಪುರ್ ಗ್ರಾಮದ ತಮ್ಮ ನಿವಾಸಕ್ಕೆ ಭೇಟಿ ನೀಡಿ ‘ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸುವಂತೆ ಬೀದರ್‍ನ ಮಾದಿಗ ದಂಡೋರ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಸದಾಶಿವ ಆಯೋಗ ಸಲ್ಲಿಸಿದ ವರದಿಯ ಜಾರಿಯ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಅಭಿ ಕಾಳೆ, ಪ್ರದೀಪ್ ಹೇಗಡೆ, ವಿಜಯಕುಮಾರ್ ವಾಘಮಾರೆ, ಶಿವಣ್ಣ ಹಿಪ್ಪಗಾಂವ್, ವಿಜಯಕುಮಾರ್ ಹಿಪ್ಪಗಾಂವ್, ದಿಲೀಪ್ ಗುಪ್ತಾ, ಫನಾರ್ಂಡೀಸ್ ಹಿಪ್ಪಳಗಾಂವ್, ಪುಟ್ಟರಾಜ ರೇಕುಳಗಿ, ಸಿದ್ದಾರ್ಥ ಲಾಮ್ಲೆ ಸೇರಿದಂತೆ ಅನೇಕರಿದ್ದರು.